ಮೈಸೂರು:ನಾಡಹಬ್ಬ ದಸರಾದಲ್ಲಿ ಪಾಲ್ಗೊಂಡ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ಬಳಿಕ ಶ್ರೀರಾಮ ಆನೆ ಮರಳಿ ಶಿಬಿರಕ್ಕೆ ಹೊರಡಲು ಲಾರಿ ಹತ್ತದೆ ರಂಪಾಟ ಮಾಡಿದೆ.
ಮರಳಿ ಶಿಬಿರಕ್ಕೆ ಹೋಗಲು ಒಪ್ಪದ ಶ್ರೀರಾಮ: ಲಾರಿ ಹತ್ತಲು ಹಿಂದೇಟು.. ರಂಪಾಟ.. ವಿಡಿಯೋ - ಗಜಪಡೆಗೆ ಸಾಂಪ್ರದಾಯಿಕ ಪೂಜೆ
ಮೈಸೂರಿನಿಂದ ಮರಳಿ ಶಿಬಿರಕ್ಕೆ ಹೋಗಲು ಶ್ರೀರಾಮ ಎಂಬ ಆನೆ ಹಿಂದೇಟು ಹಾಕಿದೆ. ಲಾರಿ ಹತ್ತದೇ ಶ್ರೀರಾಮ ರಂಪಾಟ ಮಾಡಿದ ವಿಡಿಯೋ ಇಲ್ಲಿದೆ.
ಮರಳಿ ಶಿಬಿರಕ್ಕೆ ಹೋಗಲು ಒಪ್ಪದ ಶ್ರೀರಾಮ
ಕೊನೆಗೆ ಅಭಿಮನ್ಯು ಆನೆ ಕರೆತಂದು ಲಾರಿ ಹತ್ತಿಸಲು ಪ್ರಯತ್ನಿಸಲಾಯಿತು. ಆದರೂ ಅದು ಲಾರಿ ಏರಲು ನಿರಾಕರಿಸಿತು. ಕೊನೆಗೆ ಅರ್ಜುನ ಸೇರಿದಂತೆ 4 ಆನೆಗಳನ್ನು ಕರೆತಂದು ಅರಣ್ಯ ಇಲಾಖೆ ಸಿಬ್ಬಂದಿ ಲಾರಿ ಹತ್ತಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ಇದನ್ನೂ ಓದಿ:ಜಂಬೂಸವಾರಿ ಯಶಸ್ವಿ: ಅಭಿಮನ್ಯುಗೆ ಮುತ್ತಿಟ್ಟು, ಚಾಮುಂಡೇಶ್ವರಿಗೆ ನಮಿಸಿದ ಮಾವುತ