ಮೈಸೂರು:ಕೆ.ಆರ್ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಪಕ್ಷದ ವರಿಷ್ಠರ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ನಾಯಕರಿಗೆ ಹಣ ಬಲವೇ ಮುಖ್ಯ : ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ - Kannada news
ಜೆಡಿಎಸ್ ರಾಜ್ಯಾಧ್ಯಕ್ಷನಾಗಿ ನಾನು ಶಿಫಾರಸು ಮಾಡಿದ ಒಬ್ಬರಿಗೂ ಒಂದು ಟಿಕೆಟ್ನ್ನು ಪುರಸಭೆ ಚುನಾವಣೆಯಲ್ಲಿ ನೀಡಲಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್
ನಾನು ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದರೂ, ನಾನು ಶಿಫಾರಸ್ಸು ಮಾಡಿದ ಒಬ್ಬರಿಗೂ ಪುರಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡಲಿಲ್ಲ, ಜೆಡಿಎಸ್ ನಾಯಕರಿಗೆ ಹಣ ಬಲವೇ ಮುಖ್ಯವಾಗಿದ್ದು ನಮ್ಮ ದುರಹಂಕಾರದಿಂದ ನಮಗೆ ಸೋಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೆ.ಆರ್.ನಗರ ಪುರಸಭೆಯಲ್ಲಿ ಕುರುಬ ಸಮಾಜಕ್ಕೆ 1 ಟಿಕೆಟ್ ನೀಡಲಿಲ್ಲ, ನಮ್ಮ ಸಮಾಜವನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಸಚಿವ ಸಾ.ರಾ.ಮಹೇಶ್ ವರ್ತನೆಯ ವಿರುದ್ಧ ಪರೋಕ್ಷವಾಗಿ ಅವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.