ಕರ್ನಾಟಕ

karnataka

ETV Bharat / state

'ಸಿದ್ದರಾಮಯ್ಯ ಮೇಲಿನ ದ್ವೇಷದಿಂದ ಜೆಡಿಎಸ್ ಬಿಜೆಪಿ ಜೊತೆ ಕೈ ಜೋಡಿಸಿದೆ'

ಭೂ ಸುಧಾರಣೆ ಮಸೂದೆಗೆ ಜೆಡಿಎಸ್ ಬೆಂಬಲ‌ ನೀಡಿದ ಹಿನ್ನೆಲೆ ಇತಿಹಾಸ ತಜ್ಞ ಹಾಗೂ ಪ್ರಗತಿಪರ ಚಿಂತಕ ಪ್ರೊ.ನಂಜರಾಜೇ ಅರಸ್ ಆಕ್ರೋಶ ಹೊರಹಾಕಿದ್ದಾರೆ.

prof-nanjaraj
ಪ್ರೊ.ನಂಜರಾಜೇ ಅರಸ್

By

Published : Dec 9, 2020, 3:35 PM IST

ಮೈಸೂರು: ಜೆಡಿಎಸ್ ಹೇಳೊದೊಂದು, ಆಂತರಿಕವಾಗಿ ಮಾಡೋದೆ ಒಂದು. ಸಿದ್ದರಾಮಯ್ಯ ಮೇಲೆ ದ್ವೇಷ ಸಾಧಿಸಲು ಜೆಡಿಎಸ್ ಬಿಜೆಪಿ ಜೊತೆ ಕೈಜೋಡಿಸಿದೆ ಎಂದು ಇತಿಹಾಸ ತಜ್ಞ ಹಾಗೂ ಪ್ರಗತಿಪರ ಚಿಂತಕ ಪ್ರೊ.ನಂಜರಾಜೇ ಅರಸ್ ವಾಗ್ದಾಳಿ ನಡೆಸಿದ್ದಾರೆ.

ಪ್ರೊ.ನಂಜರಾಜೇ ಅರಸ್ ಪ್ರತಿಕ್ರಿಯೆ

ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಮಗೆ ರಾಜ್ಯದಲ್ಲಿ ಸ್ವತಂತ್ರವಾಗಿ ಬೆಳೆಯಲು ಆಗಲ್ಲ ಅಂತಾನೋ ಅಥವಾ ಬಿಜೆಪಿಯವರೇ ಹಣ ಕೊಟ್ಟು ಜೆಡಿಎಸ್‌ನ ಕೊಂಡುಕೊಂಡಿದ್ದಾರಾ‌?, ಅಣ್ಣ ತಮ್ಮಂದಿರನ್ನು ಕೈಬಿಟ್ಟು ಶತ್ರುಗಳ ಜೊತೆ ಕೈಜೋಡಿಸಿದಾಗ ಅನುಮಾನ ಬಂದೇ ಬರುತ್ತದೆ ಅಲ್ಲವೇ?, ದೇವೇಗೌಡರು ರೈತರ ಮಗ ಅಂತಾರೆ, ಅವರ ಮಾರ್ಗದರ್ಶನ, ಒಪ್ಪಿಗೆ ಇಲ್ಲದೆ ಬಿಜೆಪಿಗೆ ಬೆಂಬಲಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಓದಿ:KSOU ಪ್ರವೇಶಾತಿಗೆ ಮತ್ತೊಮ್ಮೆ ದಿನಾಂಕ ವಿಸ್ತರಣೆ

ಸ್ವಾರ್ಥಕ್ಕಾಗಿ ಸಿದ್ದರಾಮಯ್ಯರನ್ನು ತುಳಿಯಲು ಬಿಜೆಪಿ ಜೊತೆ ಜೆಡಿಎಸ್ ಕೈ ಜೋಡಿಸಿದೆ. ಜೆಡಿಎಸ್‌ ಪಾಲಿಗೆ ಕಾಂಗ್ರೆಸ್‌ ಅಂದ್ರೆ ಸೋನಿಯಾಗಾಂಧಿ ಅಲ್ಲ, ಸಿದ್ದರಾಮಯ್ಯ‌. ರೈತರ ಬಗ್ಗೆ ಹಿತಾಸಕ್ತಿ ಇದ್ದಿದ್ದರೆ ಬಿಜೆಪಿ ಜೊತೆ ಕೈ ಜೋಡಿಸುತ್ತಿರಲಿಲ್ಲವೆಂದು ಕಿಡಿಕಾರಿದರು.

For All Latest Updates

TAGGED:

ABOUT THE AUTHOR

...view details