ಮೈಸೂರು: ಆಪರೇಷನ್ ಕಮಲದ ಭೀತಿಯಿಂದ ಜೆಡಿಎಸ್ ಪಾಲಿಕೆಯ ಸದಸ್ಯರು ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಪಾಲಿಕೆ ಚುನಾವಣೆಗೆ ಆಪರೇಷನ್ ಕಮಲದ ಭೀತಿ: ರೆಸಾರ್ಟ್ನಲ್ಲಿ ಜೆಡಿಎಸ್ ಸದಸ್ಯರ ವಾಸ್ತವ್ಯ - ಮೈಸೂರು ಮಹಾನಗರ ಪಾಲಿಕೆ ಚುನಾವಣೆ
ಮೇಯರ್ ಸ್ಥಾನ ಜೆಡಿಎಸ್ ಗೆ ಉಪಮೇಯರ್ ಸ್ಥಾನ ಕಾಂಗ್ರೆಸ್ ಗೆ ಎಂದು ನಿರ್ಧಾರವಾಗಿದ್ದು , ಈ ಹಿನ್ನೆಲೆಯಲ್ಲಿ ನೆನ್ನೆ ಸಂಜೆಯೇ ಜಿಡಿಎಸ್ ನ ಎಲ್ಲಾ ಪಾಲಿಕೆ ಸದಸ್ಯರು ರೆಸಾರ್ಟ್ ಸೇರಿದ್ದಾರೆ.
ನಾಳೆ ಮೈಸೂರು ಮಹಾನಗರ ಪಾಲಿಕೆಯ ಎರಡನೇ ಅವಧಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಮೈತ್ರಿ ಏರ್ಪಟಿದ್ದು, ಮೇಯರ್ ಹಾಗೂ ಉಪಮೇಯರ್ ಚುನಾವಣೆ ನಡೆಯಲಿದೆ. ಮೇಯರ್ ಸ್ಥಾನ ಜೆಡಿಎಸ್ ಗೆ ಉಪಮೇಯರ್ ಸ್ಥಾನ ಕಾಂಗ್ರೆಸ್ ಗೆ ಎಂದು ನಿರ್ಧಾರವಾಗಿದ್ದು , ಈ ಹಿನ್ನೆಲೆಯಲ್ಲಿ ನೆನ್ನೆ ಸಂಜೆಯೇ ಜಿಡಿಎಸ್ ನ ಎಲ್ಲಾ ಪಾಲಿಕೆ ಸದಸ್ಯರು ರೆಸಾರ್ಟ್ ಸೇರಿದ್ದು ಇಂದು ಕಾಂಗ್ರೆಸ್ ನ ಪಾಲಿಕೆ ಸದಸ್ಯರು ರೆಸಾರ್ಟ್ ಗೆ ಹೋಗಲಿದ್ದಾರೆ.
ಈ ಮಧ್ಯೆ ಕಾಂಗ್ರೆಸ್ ಪಕ್ಷದ ವೀಕ್ಷಕರಾಗಿ ಕೃಷ್ಣಭೈರೇಗೌಡ ಮೈಸೂರಿಗೆ ಸಂಜೆ ಆಗಮಿಸಲಿದ್ದಾರೆ. ಈ ಮಧ್ಯೆ ಪಾಲಿಕೆಯ ನಾಳಿನ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ ಆಪರೇಷನ್ ಕಮಲ ಮಾಡಲು ಒಳಗೆ ಪ್ರಯತ್ನ ನಡೆಸಿದ್ದು, ಎಲ್ಲಕ್ಕಿಂತ ಮುಖ್ಯವಾಗಿ ಜೆಡಿಎಸ್ ನ ಶಾಸಕ ಜಿ.ಟಿ ದೇವೇಗೌಡ ತಟಸ್ಥರಾಗಿರುವುದು ಆಪರೇಷನ್ ಕಮಲದ ಗುಮ್ಮ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಪಾಲಿಕೆ ಸದಸ್ಯರು ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಲಿದ್ದು, ನಾಳೆ ಬೆಳಿಗ್ಗೆ ನಡೆಯುವ ಚುನಾವಣೆಗೆ ನೇರವಾಗಿ ರೆಸಾರ್ಟ್ನಿಂದ ಆಗಮಿಸಲಿದ್ದಾರೆ.