ಮೈಸೂರು: ಕೆ.ಎಸ್.ಈಶ್ವರಪ್ಪನಿಗೆ ಇನ್ನು ಬುದ್ಧಿ ಬೆಳೆದಿಲ್ಲ. ಅವರ ಮಾತಿಗೆ ಉತ್ತರ ನೀಡುವುದಿಲ್ಲವೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಈಶ್ವರಪ್ಪಗೆ ಅಷ್ಟೊಂದು ಬುದ್ಧಿ ಬೆಳೆದಿಲ್ಲ: ಸಿದ್ದರಾಮಯ್ಯ ಟಾಂಗ್ - ನೆರೆ ಪೀಡಿತ ಪ್ರದೇಶ
ತಿ.ನರಸೀಪುರ ತಾಲೂಕಿನಲ್ಲಿ ನೆರೆ ಪೀಡಿತ ಪ್ರದೇಶಗಳನ್ನು ಪರಿಶೀಲನೆ ಮಾಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಈಶ್ವರಪ್ಪನವರಿಗೆ ಇನ್ನು ಬುದ್ಧಿ ಬೆಳೆದಿಲ್ಲ. ಅವರ ಹೇಳಿಕೆಗೆ ಏನು ಉತ್ತರ ನೀಡಲಿ ಎಂದು ಹೇಳುವ ಮೂಲಕ ಟಾಂಗ್ ನೀಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ
ತಿ.ನರಸೀಪುರ ತಾಲೂಕಿನಲ್ಲಿ ನೆರೆ ಪೀಡಿತ ಪ್ರದೇಶಗಳನ್ನು ಪರಿಶೀಲನೆ ಮಾಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಹೇಳಿಕೆಗೆ ಏನು ಉತ್ತರ ನೀಡಲಿ. ಈಶ್ವರಪ್ಪ ಹೇಳಿಕೆಗೆ ನಾನೇನು ಉತ್ತರ ನೀಡುವುದಿಲ್ಲ ಎಂದರು.
ತಿ.ನರಸೀಪುರ ಪಟ್ಟಣದಲ್ಲಿ ನಾಲ್ಕು ಮನೆಗಳು ಕುಸಿತಗೊಂಡಿವೆ. ಎಲ್ಲಾ ಮನೆಗಳಿಗೂ 50 ಸಾವಿರ ರೂ. ಪರಿಹಾರ ಕೊಡಲು ಸೂಚಿಸಿದ್ದೇನೆ. ಮಹದೇವಪ್ಪ ತಡೆಗೋಡೆ ನಿರ್ಮಿಸದಿದ್ದರೆ ತುಂಬಾ ಅನಾಹುತ ಉಂಟಾಗುತ್ತಿತ್ತು. ಮುನ್ನೆಚ್ಚರಿಕೆ ದೃಷ್ಟಿಯಿಂದ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು ಎಂದರು.