ಮೈಸೂರು: ಅಂಬೇಡ್ಕರ್ ಜಯಂತಿ, ಗುಡ್ ಫ್ರೈಡೇ, ಶನಿವಾರ ಮತ್ತು ಭಾನುವಾರದ ವೀಕೆಂಡ್ ರಜೆಗಳಿರುವುದರಿಂದ ಮೈಸೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆ ಎಲ್ಲಾ ಕ್ಷೇತ್ರಗಳು, ವ್ಯಾಪಾರ, ವಹಿವಾಟುಗಳು ನೆಲಕಚ್ಚಿದ್ದವು. ಇದರಿಂದ ಪ್ರವಾಸೋದ್ಯಮವು ಹೊರತಲ್ಲ. ಇದೀಗ ಮೈಸೂರು ಪ್ರವಾಸೋದ್ಯಮದಲ್ಲಿ ಚೇತರಿಕೆ ಕಾಣುತ್ತಿದೆ.
ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿ, 15 ಗುಡ್ ಫ್ರೈಡೇ ಹಾಗೂ ಶನಿವಾರ ಭಾನುವಾರ ವೀಕೆಂಡ್ ರಜೆ ಇರುವುದರಿಂದ ಹಾಗೂ ಎಸ್‌ಎಸ್‌ಎಲ್ಸಿ ಮಕ್ಕಳಿಗೆ ಹಾಗೂ ಶಾಲಾ ಮಕ್ಕಳಿಗೆ ಸ್ಕೂಲ್ ರಜೆ ಇರುವುದರಿಂದ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಳವಾಗಿದೆ. ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ, ಕೆಆರ್‌ಎಸ್, ಜಗನ್ಮೋಹನ ಅರಮನೆ, ರಂಗನತಿಟ್ಟು ಪಕ್ಷಿಧಾಮ, ಕಾರಂಜಿ ಕೆರೆ, ನಂಜನಗೂಡು ಸೇರಿದಂತೆ ವಿವಿಧ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿವೆ.