ಕರ್ನಾಟಕ

karnataka

ETV Bharat / state

ಗೋವುಗಳ ಅಕ್ರಮ ಸಾಗಾಟ: ಇಬ್ಬರು ವ್ಯಕ್ತಿಗಳ ಬಂಧನ - ಸಿಸಿಬಿ ಪೊಲೀಸರು

ಗೋವುಗಳನ್ನು ಅಕ್ರಮವಾಗಿ ಸಾಗಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಬೆಂಗಳೂರು-ಮೈಸೂರು ರಸ್ತೆಯ ಕೆ.ಆರ್.ಮಿಲ್ ಕಾಲೋನಿ ಬಳಿ ನಡೆದಿದೆ.

Illegal exporting of cows
ಗೋವುಗಳ ಅಕ್ರಮ ಸಾಗಾಟ

By

Published : Mar 13, 2020, 2:43 AM IST

ಮೈಸೂರು:ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರು-ಮೈಸೂರು ರಸ್ತೆಯ ಕೆ.ಆರ್.ಮಿಲ್ ಕಾಲೋನಿ ಬಳಿ ನಡೆದಿದೆ.

ಬೆಂಗಳೂರು-ಮೈಸೂರು ರಸ್ತೆಯ ಕೆ.ಆರ್. ಮಿಲ್ ಕಾಲೋನಿ ಬಳಿ ಬೊಲೆರೋ ಪಿಕ್ ಅಪ್ ವಾಹನದಲ್ಲಿ ಹಸು -ಕರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದು, ಸಿಸಿಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ಏಕಾಏಕಿ ದಾಳಿ ನಡೆಸಿದ್ದಾರೆ.

ಸಾಗಾಟ ಮಾಡುತ್ತಿದ್ದ ಅಫ್ಸಾನ್ ಖಾನ್ (23), ರುಮಾನ್ ಪಾಷ (22) ಎಂಬುವವರನ್ನು ಬಂಧಿಸಲಾಗಿದೆ. ವಾಹನದಲ್ಲಿದ್ದ 37 ಗೋವುಗಳನ್ನು ರಕ್ಷಣೆ ಮಾಡಿ ಅವುಗಳನ್ನು ಚಾಮುಂಡಿ ಬೆಟ್ಟದ ಬಳಿ ಇರುವ ಪೆಂಜಾರ ಪೋಲ್ ಸೊಸೈಟಿಗೆ ಹಸ್ತಾಂತರಿಸಲಾಗಿದೆ.

ಸಾಗಾಟ ಮಾಡಲು ಬಳಸಿದ ಬೊಲೆರೋ ವಾಹನ ಮತ್ತು ಆರೋಪಿಗಳ ಬಳಿ ಇದ್ದ 4000 ರೂ., 3 ಮೊಬೈಲ್​​ಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನೂ ಈ ಸಂಬಂಧ ನರಸಿಂಹರಾಜ ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details