ಮೈಸೂರು: ಟೆಲಿಫೋನ್ ಕದ್ದಾಲಿಕೆ ಬಗ್ಗೆ ನನಗೆ ಏನು ಗೊತ್ತಿಲ್ಲ, ಅದರ ಬಗ್ಗೆ ಆಸಕ್ತಿಯು ನನಗಿಲ್ಲ, ನಮ್ಮ ಪಕ್ಷದ ಸ್ನೇಹಿತರು ತನಿಖೆಯಾಗಬೇಕು ಎಂದು ಹೇಳಿದ್ದಾರೆ ಆದ್ದರಿಂದ ತನಿಖೆಯಾಗಲಿ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಟೆಲಿಫೋನ್ ಕದ್ದಾಲಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ: ಜಿ.ಟಿ ದೇವೇಗೌಡ
ಟೆಲಿಫೋನ್ ಕದ್ದಾಲಿಕೆ ವಿಚಾರವಾಗಿ ತನಿಖೆಯಾಗಬೇಕೆಂದು ನನ್ನ ಪಕ್ಷದ ಸ್ನೇಹಿತರು ಹೇಳಿದ್ದಾರೆ ತನಿಖೆಯಾಗಲಿ, ನನಗೆ ಅದಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಶಾಸಕ ಜಿ.ಟಿ ದೇವೇಗೌಡ ಹೇಳಿದ್ದಾರೆ.
ಇಂದು ತಮ್ಮ ಮೈಸೂರು ನಿವಾಸದಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ, ಟೆಲಿಫೋನ್ ಕದ್ದಾಲಿಕೆ ಬಗ್ಗೆ ನನಗೆ ಏನು ಗೊತ್ತಿಲ್ಲ. ಅದರ ಬಗ್ಗೆ ನನಗೆ ಆಸಕ್ತಿಯೂ ಇಲ್ಲ. ನಾನೇನಿದ್ದರು ನೇರಾ, ನೇರ ವ್ಯಕ್ತಿ. ಕೆವಲವರಿಗೆ ಇದೇ ರೀತಿಯ ಚಟಗಳಿರುತ್ತವೆ, ಇಂತಹ ಚಟ ನನಗೆ ಇಲ್ಲಾ. ಟೆಲಿಫೋನ್ ಕದ್ದಾಲಿಕೆ ವಿಚಾರದಲ್ಲಿ ತನಿಖೆಯಾಗಬೇಕೆಂದು ನಮ್ಮ ಪಕ್ಷದ ಸ್ನೇಹಿತರಾದ ಪುಟ್ಟರಾಜು, ಹಾಗೂ ಸಾ.ರಾ.ಮಹೇಶ್ ಹೇಳಿದ್ದಾರೆ. ಅದರ ಬಗ್ಗೆ ತನಿಖೆಯಾಗಲಿ ಎಂದರು.
ನಾನು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿದ್ದು, ಮೈಸೂರು ಹಾಲು ಒಕ್ಕೂಟದ ಚುನಾವಣೆಯ ನಿಮಿತ್ತ ಮಾತ್ರ, ಯಾವುದೇ ರಾಜಕೀಯ ವಿಚಾರಕ್ಕಾಗಿ ಅಲ್ಲಾ ಎಂದರು. ಈ ಬಾರಿ ಪ್ರವಾಸೋದ್ಯಮ ದೃಷ್ಟಿಯಿಂದ ಅದ್ದೂರಿ ದಸರ ಮಾಡಿದರೆ ಒಳ್ಳೆಯದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ದಸರ ಆಚರಣೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
TAGGED:
ಶಾಸಕ ಜಿ.ಟಿ ದೇವೇಗೌಡ