ಮೈಸೂರು:ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಇನ್ನೂ ಗೊತ್ತಿಲ್ಲ ಆದರೂ ಇಂತಹ ಬೆಳವಣಿಗೆ ಖಂಡಿತ ಆಶ್ಚರ್ಯ ತಂದಿದೆ ಎಂದು ಸಚಿವ ಜಿ.ಟಿ.ದೇವೇಗೌಡ ಆಶ್ಚರ್ಯದಿಂದ ಹೇಳಿಕೆ ನೀಡಿದ್ದಾರೆ.
ಅತೃಪ್ತರ ರಾಜೀನಾಮೆ ಜಂಜಾಟ: ತಿರುಪತಿ ಕಡೆಗೆ ಹೊರಟ ಜಿಟಿಡಿ - g t devegowda
ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಇನ್ನೂ ಗೊತ್ತಿಲ್ಲ ಆದರೂ ಇಂತಹ ಬೆಳವಣಿಗೆ ಖಂಡಿತ ಆಶ್ಚರ್ಯ ತಂದಿದೆ ಎಂದು ಸಚಿವ ಜಿ.ಟಿ.ದೇವೇಗೌಡ ಆಶ್ಚರ್ಯದಿಂದ ಹೇಳಿಕೆ ನೀಡಿದ್ದಾರೆ.
gtd
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕರ ರಾಜೀನಾಮೆ ನನಗೆ ಖಂಡಿತವಾಗಿಯೂ ಆಶ್ಚರ್ಯ ತಂದಿದೆ. ಆದರೆ ಈ ಬಗ್ಗೆ ಸಂಪೂರ್ಣವಾಗಿ ನನಗೆ ಗೊತ್ತಿಲ್ಲ. ಈಗ ಮಾತನಾಡುವುದು ಸರಿಯಲ್ಲ. ಆದರೆ ಶಾಸಕ ವಿಶ್ವನಾಥ್ ಅವರನ್ನು ಕರೆದುಕೊಂಡು ಬಂದಿದ್ದು ನಾನಲ್ಲ, ಆದರೆ ಆ ನಂತರ ಅವರನ್ನು ಪ್ರಾಮಾಣಿಕವಾಗಿ ದುಡಿದು ಗೆಲ್ಲಿಸಿದ್ದೇನೆ ಎಂದ ಅವರು, ನಾನು ಇಂದು ತಿರುಪತಿಗೆ ಹೋಗುತ್ತಿದ್ದೇನೆ.ನಾನೆಂದಿಗೂ ಬಿಜೆಪಿಗೆ ಹೋಗುವುದಿಲ್ಲ. ಈಗಲೂ ನನಗೆ ವಿಶ್ವಾಸವಿದೆ ಯಾರು ಬಿಜೆಪಿಗೆ ಹೋಗುವುದಿಲ್ಲ ಎಂದು ಹೇಳಿ ಹೊರಟು ಹೋದರು.