ಮೈಸೂರು: ನಗರದ ಹಲವೆಡೆ ಹೈ ಟೆನ್ಷನ್ ವೈರ್ಗಳು ಹಾದುಹೋಗಿದ್ದು, ಜನತೆ ಭೀತಿಯ ನಡುವೆ ದಿನ ಕಳೆಯುವಂತಾಗಿದೆ. ನಗರದ ರಾಮಕೃಷ್ಣನಗರ, ವಿಜಯನಗರ, ಹೆಬ್ಬಾಳ ಹಾಗು ದಟ್ಟಕಳ್ಳಿಗಳಲ್ಲಿ ಈ ಹೈಪವರ್ ವೈರ್ಗಳು ಹಾದುಹೋಗಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿವೆ.
ನಗರದದೊಳಗೆ ಹಾದುಹೋದ ಹೈಟೆನ್ಷರ್ ವೈರ್: ಯಾಮಾರಿದ್ರೆ ಕಾದಿದೆ ಕಂಟಕ - electric wire accident
ಜನವಸತಿ ಪ್ರದೇಶದಲ್ಲಿ ಹೈ ಪವರ್ ಎಲೆಕ್ಟ್ರಿಕ್ ಲೈನ್ ಹಾದು ಹೋಗಿದ್ದು, ಜನತೆ ಭೀತಿಯಲ್ಲೇ ದಿನದೂಡಬೇಕಾಗಿದೆ. ಈ ರೀತಿಯ ಹೈಟೆನ್ಷನ್ ವೈರ್ಗಳು ಜನರ ಆರೋಗ್ಯ ಹಾಗೂ ಪ್ರಾಣಿಗಳಿಗೂ ಹಾನಿ ತಂದೊಡ್ಡುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನಗರದದೊಳಗೆ ಹಾದುಹೋದ ಹೈಟೆನ್ಷರ್ ವೈರ್
ಈ ಬಗ್ಗೆ ಪರಿಸರ ತಜ್ಞ ರಾಜ್ಕುಮಾರ್ ಮಾತನಾಡಿ, ಹೈಟೆನ್ಷನ್ ಲೈನ್ಗಳು ಕಾಡು ಮತ್ತು ನಗರದ ಮಧ್ಯ ಹಾದು ಹೋಗುವುದರಿಂದ ಪ್ರಾಣಿಗಳು ಮತ್ತು ಮನುಷ್ಯರ ಜೀವಕ್ಕೆ ತೊಂದರೆಯಾಗುತ್ತದೆ. ಜನರು ಈ ವಿದ್ಯುತ್ ಲೈನ್ ಬಳಿ ಮನೆ ನಿರ್ಮಾಣ ಮಾಡುತ್ತಿರುವುದು ಇನ್ನೂ ಅಪಾಯಕಾರಿ. ಆದರೆ ಈಗ ತಂತ್ರಜ್ಞಾನ ಬದಲಾಗಿದ್ದು ನೆಲದೊಳಗೆ ಭಾರಿ ಗಾತ್ರದ ವಿದ್ಯುತ್ ಲೈನ್ ತೆಗೆದುಕೊಂಡು ಹೋಗಬಹುದಾಗಿದೆ. ಈ ಕುರಿತು ಯೋಚಿಸಿದರೆ ಒಳಿತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ತಂದೆ ಹತ್ಯೆಗೈದು ವಾರದೊಳಗೆ ಮಗನನ್ನೂ ಕೊಂದ ದುಷ್ಕರ್ಮಿಗಳು; ಬೆಚ್ಚಿಬಿದ್ದ ಮೈಸೂರು