ಕರ್ನಾಟಕ

karnataka

ETV Bharat / state

ಯುವಜನತೆ ಪಾರಂಪರಿಕ ಕಟ್ಟಡಗಳ ಇತಿಹಾಸ ಅರಿಯಬೇಕು: ಶಾಸಕ ಎಸ್​. ಎ. ರಾಮದಾಸ್​​​​​​ - ಮೈಸೂರು ದಸರಾ ಸುದ್ದಿ

ಪ್ರತಿಯೊಂದು ಪಾರಂಪರಿಕ ಕಟ್ಟಡವೂ ತನ್ನದೇ ಇತಿಹಾಸವನ್ನು ಸಾರಿ ಹೇಳುತ್ತಿದೆ. ಇದನ್ನು ಯುವಜನರಿಗೆ ತಲುಪಿಸುವುದರ ಜೊತೆಗೆ ಶಾಶ್ವತವಾಗಿ ಉಳಿಯುವಂತೆ ಕೊಡುಗೆಯಾಗಿ ನೀಡಲು ಆಲೋಚಿಸಬೇಕು ಎಂದು ಶಾಸಕ ಎಸ್. ಎ. ರಾಮದಾಸ್ ಹೇಳಿದ್ದಾರೆ.

ದಸರಾ ಮಹೋತ್ಸವದ ಪಾರಂಪರಿಕ ಉಡುಗೆಯಲ್ಲಿ ನಡಿಗೆ ಕಾರ್ಯಕ್ರಮ

By

Published : Oct 1, 2019, 1:05 PM IST

Updated : Oct 1, 2019, 2:09 PM IST

ಮೈಸೂರು: ಯುವಜನರು ಪಾರಂಪರಿಕ ಕಟ್ಟಡಗಳ ಐತಿಹ್ಯ ಅರಿತು, ಅವುಗಳನ್ನು ಸಂರಕ್ಷಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕಿದೆ ಎಂದು ಶಾಸಕ ಎಸ್. ಎ. ರಾಮದಾಸ್ ಹೇಳಿದ್ದಾರೆ.

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯಿಂದ ನಗರದ ಟೌನ್ ಹಾಲ್ ಬಳಿ ಆಯೋಜಿಸಿದ್ದ ಪಾರಂಪರಿಕ ಉಡುಗೆಯಲ್ಲಿ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮೈಸೂರು ನಗರದಾದ್ಯಂತ ಪಾರಂಪರಿಕ ಕಟ್ಟಡಗಳನ್ನು ನಿರ್ಮಿಸುವ ಮೂಲಕ ನಮ್ಮ ಪೂರ್ವಿಕರು ಗತವೈಭವವನ್ನು ಸಾರಿ ಹೋಗಿದ್ದಾರೆ ಎಂದರು.

ದಸರಾ ಮಹೋತ್ಸವದ ಪಾರಂಪರಿಕ ಉಡುಗೆಯಲ್ಲಿ ನಡಿಗೆ ಕಾರ್ಯಕ್ರಮ

ಪ್ರತಿಯೊಂದು ಪಾರಂಪರಿಕ ಕಟ್ಟಡವೂ ತನ್ನದೇ ಇತಿಹಾಸವನ್ನು ಸಾರಿ ಹೇಳುತ್ತಿದೆ. ಇದನ್ನು ಯುವಜನರಿಗೆ ತಲುಪಿಸಿ, ಜೊತೆಗೆ ನಾವು ಭವಿಷ್ಯದ ಯುವ ಜನಾಂಗಕ್ಕೆ ಶಾಶ್ವತವಾಗಿ ಉಳಿಯುವಂತೆ ಕೊಡುಗೆಯಾಗಿ ನೀಡಲು ಆಲೋಚಿಸಬೇಕು ಎಂದು ಶಾಸಕ ರಾಮದಾಸ್​ ತಿಳಿಸಿದರು.

ದಸರಾ ಮಹೋತ್ಸವದ ಪಾರಂಪರಿಕ ಉಡುಗೆಯಲ್ಲಿ ನಡಿಗೆ ಕಾರ್ಯಕ್ರಮ

ಸಂಪನ್ಮೂಲ ವ್ಯಕ್ತಿ ನಿವೃತ್ತ ಪ್ರೊಫೆಸರ್ ರಂಗರಾಜು ಮಾತನಾಡಿ, ಪರಂಪರೆ ಇಲಾಖೆಯಿಂದ ನಗರದಲ್ಲಿ 235 ಕಟ್ಟಡಗಳನ್ನು ಪಾರಂಪರಿಕ ಕಟ್ಟಡಗಳೆಂದು ಗುರುತಿಸಲಾಗಿತ್ತು. ಈಗ ಆ ಪಟ್ಟಿಗೆ ಇನ್ನೂ 250 ಕಟ್ಟಡಗಳನ್ನು ಹೊಸದಾಗಿ ಸೇರಿಸಲಾಗಿದೆ. ಆದರೆ ಸರ್ಕಾರ 98 ಕಟ್ಟಡಗಳನ್ನು ಮಾತ್ರ ಪಾರಂಪರಿಕ ಕಟ್ಟಡಗಳೆಂದು ಘೋಷಿಸಿದೆ. ಉಳಿದ ಕಟ್ಟಡಗಳನ್ನೂ ಪಾರಂಪರಿಕ ಕಟ್ಟಡಗಳೆಂದು ಘೋಷಣೆ ಮಾಡಿ, ಸಂರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ದಸರಾ ಮಹೋತ್ಸವದ ಪಾರಂಪರಿಕ ಉಡುಗೆಯಲ್ಲಿ ನಡಿಗೆ ಕಾರ್ಯಕ್ರಮ

ಈ ಸಂದರ್ಭದಲ್ಲಿ ಶಾಸಕ ಎಲ್. ನಾಗೇಂದ್ರ, ಮೇಯರ್ ಪುಷ್ಪಲತ ಜಗನ್ನಾಥ್, ದಸರಾ ಪಾರಂಪರಿಕ ನಡಿಗೆ ಉಪಸಮಿತಿ ಅಧ್ಯಕ್ಷ ಕೃಷ್ಣ, ಉಪಾಧ್ಯಕ್ಷರಾದ ಪ್ರಸಾದ್ ಬಾಬು, ವಸಂತ ಕುಮಾರ್, ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆ ಉಪನಿರ್ದೇಶಕಿ ನಿರ್ಮಲಾ ಮಠಪತಿ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

Last Updated : Oct 1, 2019, 2:09 PM IST

ABOUT THE AUTHOR

...view details