ಕರ್ನಾಟಕ

karnataka

ETV Bharat / state

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಕೂಡಿಟ್ಟ ಹಣ ನೀಡಿದ ವಿಶೇಷ ಚೇತನ ಬಾಲಕ! - ಅಯೋಧ್ಯೆ ರಾಮಮಂದಿರ ನಿರ್ಮಾಣ

ವಿಶೇಷ ಚೇತನ ಬಾಲಕ ಶ್ರೀನಿವಾಸ್ ತಾನು ಸಂಗ್ರಹಿಸಿದ ಹಣವನ್ನು ಶ್ರೀರಾಮ ಮಂದಿರ ನಿರ್ಮಾಣ ನಿಧಿಗೆ ಸಮರ್ಪಿಸಿದ್ದಾನೆ. ಹಣವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಪ್ರಾಂತ ಕಾರ್ಯನಿರ್ವಾಹಕ ವೆಂಕಟರಾಮ್ ಅವರಿಗೆ ನೀಡಿ, ರಾಮ ಮಂದಿರ ನಿರ್ಮಾಣಕ್ಕೆ ಬಳಸಿಕೊಳ್ಳಲು ಮನವಿ ಮಾಡಿದ್ದಾನೆ.

handicap boy donated his saving for the construction of Ayodhya Ram Mandir
ಅಯೋಧ್ಯೆ ರಾಮಮಂದಿರ ನಿರ್ಮಾಣ

By

Published : Jan 4, 2021, 10:00 PM IST

ಮೈಸೂರು: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕಾಗಿ ವಿಶೇಷ ಚೇತನ ಬಾಲಕನೋರ್ವ ಕೂಡಿಟ್ಟ ಗೋಲಕದ ಹಣವನ್ನು ನೀಡಿದ್ದಾನೆ.

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಕೂಡಿಟ್ಟ ಹಣ ನೀಡಿದ ವಿಶೇಷ ಚೇತನ

ನಗರದಲ್ಲಿ ನಡೆಯುತ್ತಿರುವ ಶ್ರೀರಾಮ ಮಂದಿರ ನಿಧಿ ಸಮರ್ಪಣ ಅಭಿಯಾನಕ್ಕೆ ಮಹದೇವಪುರ ಬಡಾವಣೆಯ ವಿಶೇಷ ಚೇತನ ಬಾಲಕ ಶ್ರೀನಿವಾಸ್‌, ತಾನು ಸಂಗ್ರಹಿಸಿದ್ದ ಹಣವನ್ನು ಶ್ರೀರಾಮ ಮಂದಿರ ನಿರ್ಮಾಣ ನಿಧಿಗೆ ಸಮರ್ಪಿಸಿದ್ದಾನೆ. ಗೋಲಕದ ಹಣವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಪ್ರಾಂತ ಕಾರ್ಯನಿರ್ವಾಹಕ ವೆಂಕಟರಾಮ್ ಅವರಿಗೆ ನೀಡಿ, ರಾಮ ಮಂದಿರ ನಿರ್ಮಾಣಕ್ಕೆ ಬಳಸಿಕೊಳ್ಳಲು ಮನವಿ ಮಾಡಿದ್ದಾನೆ.

ಓದಿ-ಆ್ಯಪ್​ ಮೂಲಕ ಏರ್ ಟಿಕೆಟ್ ಬುಕ್​​ ಮಾಡಿದವನಿಗೆ 7 ಲಕ್ಷ ದೋಖಾ!

ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರು ಜೆಎಲ್​ಬಿ ರಸ್ತೆಯಲ್ಲಿರುವ ಆರ್​ಎಸ್​ಎಸ್ ಕಚೇರಿಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ವತಿಯಿಂದ ಭಾನುವಾರ ಸಂಜೆ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದಾರೆ. ಆರ್​ಎಸ್​ಎಸ್ ಮುಖಂಡರು ಹಾಗೂ ಕಾರ್ಯಕರ್ತರು ಬೂತ್ ಮಟ್ಟದಿಂದ ನಿಧಿ ಸಂಗ್ರಹಕ್ಕೆ ಮುಂದಾಗಿದ್ದಾರೆ.

ABOUT THE AUTHOR

...view details