ಮೈಸೂರು: ಸರಗೂರು ತಾಲೂಕಿನ ಸಮೀಪದಲ್ಲೇ ಇರುವ ಹಳೆಹೆಗ್ಗುಡಿಲು ಗ್ರಾಮದ ಸ್ಥಿತಿ ಚಿಂತಾಜನಕವಾಗಿದೆ. ಗ್ರಾಮದ ನೈರ್ಮಲ್ಯ ಹದಗೆಟ್ಟಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.
ಸಮಸ್ಯೆಗಳ ಸುಳಿಯಲ್ಲಿ ಹಳೆಹೆಗ್ಗುಡಿಲು... ಆಶ್ವಾಸನೆಗೆ ಸೀಮಿತವಾದ ಅಧಿಕಾರಿಗಳು
ಆರೇಳು ತಿಂಗಳಿಂದ ಚರಂಡಿಯಲ್ಲಿ ನಿಂತ ನೀರು ಕೊಳೆತು ಗಬ್ಬು ನಾರುತ್ತಿದ್ದರೂ ಸಂಬಂಧಪಟ್ಟ ಗ್ರಾಮ ಪಂಚಾಯತ್ನ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ. ಮುಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ ನೀರಿನ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿವೆ.
ಆರೇಳು ತಿಂಗಳಿಂದ ಚರಂಡಿಯಲ್ಲಿ ನಿಂತ ನೀರು ಕೊಳೆತು ಗಬ್ಬು ನಾರುತ್ತಿದ್ದರೂ ಸಂಬಂಧಪಟ್ಟ ಗ್ರಾಮ ಪಂಚಾಯತ್ನ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ. ಮುಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ ನೀರಿನ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿವೆ.
ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಬಂದಿದ್ದ ಜಿಲ್ಲಾ ಪಂಚಾಯತ್ನ ಸದಸ್ಯರು ಈವರೆಗೂ ಗ್ರಾಮಕ್ಕೆ ಕಾಲಿಟ್ಟಿಲ್ಲ. ಒಂದು ಕಡೆ ಗ್ರಾಮದ ಶಿಥಿಲಗೊಂಡ ಶಾಲೆ ಬೀಳುವ ಹಂತ ತಲುಪುತ್ತಿದ್ದು, ಮತ್ತೊಂದೆಡೆ ನೀರಿನ ಟ್ಯಾಂಕ್ ಕೂಡ ಆಗೋ ಈಗೋ ಬೀಳುತ್ತೇನೆ ಎಂದು ಜನರನ್ನು ಬೆಚ್ಚಿಸುವಂತಿದೆ. ಈ ಎಲ್ಲಾ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಈವರೆಗೂ ಆಶ್ವಾಸನೆ ನೀಡುತ್ತಾರೆಯೇ ಹೊರತು ಪರಿಹಾರ ನೀಡುವ ಕಾರ್ಯಕ್ಕೆ ಮುಂದಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.