ಕರ್ನಾಟಕ

karnataka

ETV Bharat / state

ನಾಳೆ ಸಂಪುಟ ರಿಸಲ್ಟ್​​: ಚಿಂತೆಗೀಡಾದ ಪ್ರಬಲ ಸಚಿವಾಕಾಂಕ್ಷಿ ವಿಶ್ವನಾಥ್​ - ವಿಧಾನ ಪರಿಷತ್ ಸದಸ್ಯ ವಿಶ್ವನಾಥ್

ನಾಳೆಯೇ ನೂತನ ಸಚಿವರ ಹೆಸರು ಪ್ರಕಟಿಸುವುದಾಗಿ ಬಿಎಸ್​​​ವೈ ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

MP Vishwanath
ವಿಧಾನ ಪರಿಷತ್ ಸದಸ್ಯ ವಿಶ್ವನಾಥ್

By

Published : Jan 12, 2021, 10:33 PM IST

ಮೈಸೂರು: ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆ ಸಂಪುಟ ವಿಸ್ತರಣೆಗೆ ಸಮಯ ನಿಗದಿ ಮಾಡಿದ್ದಾರೆ. ಈ ನಡುವೆ ಸಚಿವಾಕಾಂಕ್ಷಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದ್ದು, ಯಾರಿಗೆಲ್ಲ ಮಂತ್ರಿಪಟ್ಟ ಒಲಿಯಲಿದೆ ಎಂಬುದು ನಾಳೆ ಅಂತಿಮವಾಗಲಿದೆ.

ಈ ನಡುವೆ ಸಚಿವಾಕಾಂಕ್ಷಿ ಹೆಚ್​.ವಿಶ್ವನಾಥ್​​​ಗೆ ಸಚಿವ ಸ್ಥಾನ ನೀಡಲಿದ್ದಾರಾ ಎಂಬುದು ಇನ್ನೂ ಗೌಪ್ಯವಾಗಿದ್ದು, ಈ ಹಿನ್ನೆಲೆ ವಿಶ್ವನಾಥ್ ಚಿಂತೆಗೀಡಾಗಿದ್ದಾರೆ. ಮೈಸೂರಿನ ವಿಜಯನಗರದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏರ್ಪಡಿಸಿದ್ದ 'ರಾಮಕೃಷ್ಣ ಹೆಗಡೆ ಒಂದು ನೆನಪು' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು ಗಾಢ ಚಿಂತನೆಯಲ್ಲಿ ತೊಡಗಿರುವುದು ಕಂಡುಬಂತು.

ಚಿಂತೆಗೀಡಾದ ಪ್ರಬಲ ಸಚಿವಾಕಾಂಕ್ಷಿ ವಿಶ್ವನಾಥ್​

ಇದೆಲ್ಲದರ ನಡುವೆ ನಾಳೆಯೇ ನೂತನ ಸಚಿವರ ಹೆಸರು ಪ್ರಕಟಿಸುವುದಾಗಿ ಬಿಎಸ್​​​ವೈ ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಸಂಪುಟ ಸೇರಲಿರುವ ಸಂಭಾವ್ಯ ಸಚಿವರ ಪಟ್ಟಿ ಇಂತಿದೆ!

ABOUT THE AUTHOR

...view details