ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಡಿಕೆಶಿ ಜೊತೆ ಪೂಜೆಗೆ ಆಗಮಿಸಿದ ಶಾಸಕ ಜಿ.ಟಿ.ದೇವೇಗೌಡ, ಜೆಡಿಎಸ್ ವರಿಷ್ಠ ದೇವೇಗೌಡರು ಬಂದಾಗ ಅವರನ್ನು ಭೇಟಿ ಮಾಡದೆ ಹೊರಟು ಹೋದ ಘಟನೆ ನಡೆಯಿತು.
ದೊಡ್ಡಗೌಡರನ್ನು ಭೇಟಿಯಾಗದೇ ಹೊರಟು ಹೋದ ಜಿ ಟಿ ದೇವೇಗೌಡ..! ಮತ್ತೆ ಮುನಿಸು ಬಹಿರಂಗ
ಚಾಮುಂಡೇಶ್ವರಿ ಕ್ಷೇತ್ರಕ್ಕೆ ಆಗಮಿಸಿದ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿಡಿ ದೇವೇಗೌಡ ಭೇಟಿಯಾಗದೇ ಹೋಗಿರುವುದು ಪಕ್ಷದ ಮುಖಂಡರು, ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಇಂದು ಚಾಮುಂಡಿ ಬೆಟ್ಟದಲ್ಲಿ ಹಲವಾರು ರಾಜಕೀಯ ಘಟನೆಗಳು ನಡೆದಿದ್ದು, ಅದರಲ್ಲಿ ಜೆಡಿಎಸ್ ನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಡಿಕೆಶಿ ಜೊತೆ ಚಾಮುಂಡಿ ತಾಯಿಯ ಪೂಜೆಗೆ ಆಗಮಿಸಿ ಅರ್ಚನೆಯಲ್ಲಿ ಪಾಲ್ಗೊಂಡರು. ನಂತರ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಆಗಮಿಸಿದಾಗ ಅವರನ್ನು ಭೇಟಿಯಾಗದೇ ಶಾಸಕ ಜಿ.ಟಿ.ದೇವೇಗೌಡರು ಹೊರಟು ಹೋದ ಪ್ರಸಂಗ ನಡೆಯಿತು.
ಈ ಮೂಲಕ ಜೆಡಿಎಸ್ ಜೊತೆಗಿನ ಅಸಮಾಧಾನವನ್ನು ಮತ್ತೊಮ್ಮೆ ಹೊರಹಾಕಿದ್ದಾರೆ. ಈ ಹಿಂದೆಯೂ ಸಹ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮೈಸೂರಿಗೆ ಬಂದ ಸಂದರ್ಭದಲ್ಲಿ ಅವರನ್ನು ಭೇಟಿಯಾಗದೇ ದೂರ ಉಳಿಯುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು.