ಮೈಸೂರು:ಭಾವಿ ಮುಖ್ಯಮಂತ್ರಿ ರಗಳೆ ಕಾಂಗ್ರೆಸ್ನಲ್ಲಿ ದಿನದಿಂದ ದಿನಕ್ಕೆ ತೀವ್ರಗೊಂಡಿದೆ. ಮುಂದಿನ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಎಂದು ಅವರ ಅಭಿಮಾನಿಗಳು ಮೈಸೂರಿನಲ್ಲಿ ಘೋಷಣೆ ಕೂಗಿದ್ದಾರೆ. ಆದ್ರೆ ಇದರಿಂದ ಗರಂ ಆದ ಅವರು ಬಾಯಿ ಮುಚ್ಚಿ ಎಂದು ಅಭಿಮಾನಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಚಾಮುಂಡಿ ಬೆಟ್ಟದ ತಪ್ಪನಲ್ಲಿರುವ ಸುತ್ತೂರು ಶಾಖಾ ಮಠ ಗೇಟ್ ಮುಂಭಾಗ ಆಗಮಿಸಿದ ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಅವರಿಗೆ ಸ್ವಾಗತ ಕೋರಿದ ಅಭಿಮಾನಿಗಳು ಪರಮೇಶ್ವರ್ ಪರ ಜೈಕಾರ ಕೂಗಿದ್ದಾರೆ. ಮುಂದಿನ ಮುಖ್ಯಮಂತ್ರಿ ಪರಮೇಶ್ವರ್ ಎಂದು ಘೋಷಣೆ ಕೂಗಿದಾಗ, ಬಾಚಿ ಮುಚ್ಚಿ ಎಂದು ಪರಮೇಶ್ವರ್ ವಾನ್೯ ಮಾಡಿದ್ದಾರೆ.