ಕರ್ನಾಟಕ

karnataka

ETV Bharat / state

ಶಾಸಕರ ತಂದೆಯ ಸೈಟ್​​ಗೆ ನಕಲಿ ಮಾಲೀಕರನ್ನು ಸೃಷ್ಟಿಸಿದ ವಂಚಕರು: ಮೈಸೂರಿನಲ್ಲಿ ಮೂವರ ಬಂಧನ - ನಕಲಿ ಮಾಲೀಕರನ್ನು ಸೃಷ್ಟಿಸಿದ ವಂಚಕರು

ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಅವರ ತಂದೆಯ ಹೆಸರಲ್ಲಿದ್ದ ಸೈಟ್​ಗೆ ವಂಚಕರು ನಕಲಿ ದಾಖಲೆ ಹಾಗೂ ಮಾಲೀಕರನ್ನು ಸೃಷ್ಟಿಸಿ ಮಾರಾಟ ಮಾಡಿರುವ ಪ್ರಕರಣ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.

fraudsters-creates-fake-owners-for-mlas-fathers-site-three-arrested-in-mysuru
ಶಾಸಕರ ತಂದೆಯ ಸೈಟ್​ಗೇ ನಕಲಿ ಮಾಲೀಕರನ್ನು ಸೃಷ್ಟಿಸಿದ ವಂಚಕರು: ಮೈಸೂರಿನಲ್ಲಿ ಮೂವರ ಬಂಧನ

By

Published : Sep 7, 2022, 3:45 PM IST

ಮೈಸೂರು: ನಗರದ ಪ್ರತಿಷ್ಠಿತ ಬಡಾವಣೆಗಳ ಸೈಟ್​ ಮತ್ತು ಜಮೀನುಗಳ ನಕಲಿ ದಾಖಲೆ ಸೃಷ್ಟಿಸಿ ಮೋಸ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕುವೆಂಪು ನಗರ ಪೊಲೀಸರು ಬಂಧಿಸಿದ್ದಾರೆ.

ಅಪಾರ್ಟ್​ಮೆಂಟ್​​ವೊಂದರಲ್ಲಿ ಕುಳಿತು ಈ ವಂಚಕರು ನಕಲಿ ದಾಖಲೆ ಸೃಷ್ಟಿಸಿ ಆಸ್ತಿಗಳನ್ನು ಮಾರಾಟ ಮಾಡುತ್ತಿದ್ದರು. ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಪ್ರವೀಣ್ ಗುಂಟಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಖದೀಮರನ್ನು ಬಂಧಿಸಿದೆ.

ಶಾಸಕರ ತಂದೆಯ ಸೈಟ್​ಗೂ ಕನ್ನ:ಬೆಂಗಳೂರಿನ ಶಿವಾಜಿನಗರ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಮೂಲತಃ ಮೈಸೂರಿನವರಾಗಿದ್ದಾರೆ. ಅವರ ತಂದೆ ನಗರದ ಪ್ರತಿಷ್ಠಿತ ಬಡಾವಣೆಯೊಂದರಲ್ಲಿ ಸೈಟ್ ಹೊಂದಿದ್ದಾರೆ. ಆ ಸೈಟ್​ಗೆ ವಂಚಕರು ನಕಲಿ ದಾಖಲೆ ಹಾಗೂ ಮಾಲೀಕರನ್ನು ಸೃಷ್ಟಿಸಿ ಮಾರಾಟ ಮಾಡಿದ್ದರು.

ಶಾಸಕರ ತಂದೆ ತಮ್ಮ ನಿವೇಶನಕ್ಕೆ ಸಂಬಂಧಿಸಿದಂತೆ ದಾಖಲೆ ಪಡೆಯಲು ಬಂದಾಗ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ಮೆಟಗಳ್ಳಿ ಪೊಲೀಸ್ ಠಾಣೆಗೂ ಅವರು ದೂರು ನೀಡಿದ್ದರು. ಇದೀಗ ವಂಚಕರು ಶಾಸಕರ ತಂದೆಯ ಸೈಟ್​ಗೂ ಕನ್ನ ಹಾಕಿದ್ದರು ಎಂದು ಬಯಲಾಗಿದೆ.

ಬಂಧಿತ ಆರೋಪಿಗಳಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಲು ಬಳಸುತ್ತಿದ್ದ ಲ್ಯಾಪ್​ಟ್ಯಾಪ್, ಪ್ರಿಂಟರ್, ಸ್ಕ್ಯಾನರ್, ಮೊಬೈಲ್ ಹಾಗೂ ವಿವಿಧ ಬ್ಯಾಂಕ್ ಮತ್ತು ವಿವಿಧ ಇಲಾಖೆ ಅಧಿಕಾರಿಗಳ ನಕಲಿ ಸೀಲ್​ಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆ ಹಿನ್ನೆಲೆಯಲ್ಲಿ ಆರೋಪಿಗಳ ಹೆಸರನ್ನು ಪೊಲೀಸರು ಬಹಿರಂಗ ಪಡಿಸಿಲ್ಲ.

ಈ ಸಂಬಂಧ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ಕುಸಿದು ಬಿದ್ದ ಮನೆ, ಬಾಲಕಿ ಪ್ರಾಣಾಪಾಯದಿಂದ ಪಾರು.. ಉಪ್ಪಾರ ಬಡಾವಣೆಗೆ ಶಾಸಕ, ಡಿಸಿ ಭೇಟಿ!

ABOUT THE AUTHOR

...view details