ಕರ್ನಾಟಕ

karnataka

ETV Bharat / state

ಮೈಸೂರು ಚಿನ್ನಾಭರಣ ಅಂಗಡಿ ದರೋಡೆ ಪ್ರಕರಣ: ನಾಲ್ವರ ಬಂಧನ - jewellery shop robbery case

ಆಗಸ್ಟ್‌ 23ರಂದು ಮೈಸೂರಿನ ವಿದ್ಯಾರಣ್ಯಪುರಂನ ಪ್ರಮುಖ ರಸ್ತೆಯಲ್ಲಿರುವ ಅಮೃತ್ ಗೋಲ್ಡ್ ಚಿನ್ನಾಭರಣ ಅಂಗಡಿ ಮಾಲೀಕನನ್ನು ಕಟ್ಟಿಹಾಕಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

four arrested
ನಾಲ್ವರ ಬಂಧನ

By

Published : Aug 28, 2021, 9:16 AM IST

ಮೈಸೂರು: ವಿದ್ಯಾರಣ್ಯಪುರಂನ ಪ್ರಮುಖ ರಸ್ತೆಯಲ್ಲಿರುವ ಅಮೃತ್ ಗೋಲ್ಡ್ ಅಂಡ್‌ ಸಿಲ್ವರ್ ಚಿನ್ನಾಭರಣ ಅಂಗಡಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಬೈ ಥಾಣೆಯ ಬಿವಾಂಡಿ ಮೂಲದ ರಾಕೇಶ್, ಮುಂಬ್ರಾನ ಸಯೀದ್ ಅಲಿ ಇರಾನಿ, ಫಿರೋಜ್ ಅಲಿ ಸಯೀದ್, ಬಿವಾಂಡಿಯ ಯಾಸೀರ್ ಅಲಿ ಬಂಧಿತ ದರೋಡೆಕೋರರು.

ಇದನ್ನೂ ಓದಿ:ಚಿನ್ನದಂಗಡಿ ದರೋಡೆ ವೇಳೆ ಅಮಾಯಕನಿಗೆ ಗುಂಡು ಹಾರಿಸಿ ಹತ್ಯೆಗೈದ ದುಷ್ಕರ್ಮಿಗಳು: ಸಿಸಿಟಿವಿ ವಿಡಿಯೋ

ಮೈಸೂರಿನ ಸಿಸಿಬಿ ಹಾಗೂ ವಿದ್ಯಾರಣ್ಯಪುರಂ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು‌ ಬಂಧಿಸಿದ್ದಾರೆ. ಉತ್ತರ ಪ್ರದೇಶದಲ್ಲಿರುವ ಮತ್ತಿಬ್ಬರು ಖದೀಮರು ಪೊಲೀಸರ ಕೈಗೆ ಸಿಗದೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದಾರೆ.

ಘಟನೆ ಹಿನ್ನೆಲೆ

ಆಗಸ್ಟ್‌ 23 ರಂದು ವಿದ್ಯಾರಣ್ಯಪುರಂನ ಪ್ರಮುಖ ರಸ್ತೆಯಲ್ಲಿರುವ ಅಮೃತ್ ಗೋಲ್ಡ್ ಅಂಡ್‌ ಸಿಲ್ವರ್ ಚಿನ್ನಾಭರಣ ಅಂಗಡಿಗೆ ನುಗ್ಗಿದ ದರೋಡೆಕೋರರು ಮಾಲೀಕ ಧರ್ಮೇಂದ್ರನನ್ನ ಥಳಿಸಿ, ದಡದಹಳ್ಳಿ ಚಂದ್ರು ಎಂಬಾತನನ್ನು ಹತ್ಯೆ ಮಾಡಿ ಪರಾರಿಯಾಗಿದ್ದರು‌‌.

ABOUT THE AUTHOR

...view details