ಕರ್ನಾಟಕ

karnataka

ETV Bharat / state

ಅಗ್ನಿಶಾಮಕ ದಳ ನಾಮಫಲಕದ ಗೋಡೆ ಕುಸಿತ : ತಪ್ಪಿದ ಭಾರಿ ಅನಾಹುತ

ಮೈಸೂರು ಮಹಾರಾಜರು ಕಟ್ಟಿಸಿದ ಸುಮಾರು 120 ವರ್ಷದ ಹಳೆಯದಾದ ಅಗ್ನಿಶಾಮಕ ಠಾಣೆಯ ಮುಂಭಾಗದ ನಾಮಫಲಕದ ಗೋಡೆ ಭಾರಿ ಮಳೆಗೆ ಕುಸಿದಿದ್ದು, ರಜಾ ದಿನವಾದ್ದರಿಂದ ಭಾರಿ ಅನಾಹುತ ತಪ್ಪಿದೆ.

ಮೈಸೂರು ಆಗ್ನಿಶಾಮಕ ದಳ

By

Published : Aug 9, 2019, 8:47 PM IST

ಮೈಸೂರು : ಭಾರಿ ಮಳೆಗೆ ರಾಜರ ಕಾಲದ ಆಗ್ನಿಶಾಮಕ ಠಾಣೆಯ ನಾಮ ಫಲಕದ ಚಾವಣಿ ಕುಸಿದಿದ್ದು ಭಾರಿ ಅನಾಹುತ ತಪ್ಪಿದೆ.

ನಗರದ ಸರಸ್ವತಿ ಪುರಂನಲ್ಲಿರುವ ಮೈಸೂರು ಮಹಾರಾಜರು ಕಟ್ಟಿಸಿದ ಅಗ್ನಿಶಾಮಕ ಠಾಣೆಯ ಮುಂಭಾಗದ ನಾಮಫಲಕದ ಗೋಡೆ ಭಾರಿ ಮಳೆಗೆ ಕುಸಿದಿದೆ. ಪ್ರತಿದಿನ ಈ ಸ್ಥಳದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಇರುತ್ತಿದ್ದರು, ರಜಾ ದಿನವಾದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.

1989 ರಲ್ಲಿ ಅಂದಿನ ಮಹಾರಾಜರು ಕಟ್ಟಿಸಿದ ಸುಮಾರು 120 ವರ್ಷದ ಹಳೆಯದಾದ ಪಾರಂಪರಿಕ ಕಟ್ಟಡ ಶಿಥಿಲಾವ್ಯಸ್ಥೆಯಿಂದಾಗಿ ಬಿದ್ದಿದೆ ಎನ್ನಲಾಗಿದೆ. ‌ ಸ್ಥಳಕ್ಕೆ ಪ್ರಭಾರಿ ಮಹಾನಗರ ಪಾಲಿಕೆಯ ಆಯುಕ್ತ ಕಾಂತರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಲು ಅವರು ನಿರಾಕರಿಸಿದರು.

ಆಗ್ನಿಶಾಮಕ ದಳ ನಾಮಫಲಕ ಕಟ್ಟಡ ಕುಸಿತ

ನಂತರ ಪ್ರಾದೇಶಿಕ ಆಗ್ನಿಶಾಮಕ ದಳದ ಅಧಿಕಾರಿ ಈಶ್ವರ್ ನಾಯ್ಕ್ ಮಾತನಾಡಿ, ಹಳೆಯ ಕಟ್ಟಡವಾಗಿರುವುದರಿಂದ ಮಳೆಯಿಂದ ಕುಸಿದಿದೆ, ಸರಿಯಾಗಿ ನಿರ್ವಹಣೆ ಮಾಡಿದರೂ ಈ ರೀತಿ ಕುಸಿದಿದ್ದು ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಸರಿ ಪಡಿಸುವ ಕೆಲಸ ಮಾಡಲಾಗುವುದು ಎಂದರು. ಜೊತೆಗೆ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ, ಕುಸಿತದ ಸಂದರ್ಭದಲ್ಲಿ ಪೋಸ್ಟ್ ನೀಡಲು ಬಂದ ಮಹಿಳಾ ಪೋಸ್ಟ್ ವುಮೆನ್ ನ ದ್ವಿಚಕ್ರ ವಾಹನ ಜಖಂ ಆಗಿದೆ ಎಂದು ಅವರು ಮಾಹಿತಿ ನೀಡಿದರು.

ABOUT THE AUTHOR

...view details