ಕರ್ನಾಟಕ

karnataka

ETV Bharat / state

ವಿದ್ಯುತ್​​ ಹರಿದು ಪವರ್​ಮ್ಯಾನ್​​ ಗಂಭೀರ: ಕೆಪಿಟಿಸಿಎಲ್​​ನ​​​​ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್​ಐಆರ್​​

ನಂಜನಗೂಡು ತಾಲೂಕಿನ ರಾಂಪುರ ನಾಲೆ ಬಳಿ ಪವರ್ ಲೈನ್ ಹಾಳಾಗಿತ್ತು, ಇದನ್ನು ಸರಿಮಾಡಲು ಕೆಪಿಟಿಸಿಎಲ್ ನೌಕರ ಮಂಜು ಎಂಬುವವರು ವಿದ್ಯುತ್ ಕಂಬ ಏರಿದ್ದರು. ಈ‌ ಸಂದರ್ಭದಲ್ಲಿ ಸಂತೋಷ್ ಕುಮಾರ್ ಹಾಗೂ ಪವರ್ ಸ್ಟೇಷನ್ ಇನ್​​ಚಾರ್ಜ್ ಪುಟ್ಟರಾಜು ಪವರ್ ಆನ್ ಮಾಡಿಸಿದ್ದು, ಪವರ್​​​ಮ್ಯಾನ್​ ಮಂಜುಗೆ ವಿದ್ಯುತ್​ ತಗುಲಿತ್ತು.

Power Accident: FIR against two officers of KPTCL
ಪವರ್​ಮ್ಯಾನ್​​ ವಿದ್ಯುತ್​​ ಅಪಘಾತ: ಕೆಪಿಟಿಸಿಎಲ್​​ನ​​​​ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್​ಐಆರ್​​

By

Published : Aug 18, 2020, 3:41 PM IST

ಮೈಸೂರು: ವಿದ್ಯುತ್ ದುರಸ್ತಿ ಮಾಡುವಾಗ ಕೆಪಿಟಿಸಿಎಲ್ ಅಧಿಕಾರಿಗಳು ಪವರ್ ಆನ್ ಮಾಡಿಸಿದ್ದ ಹಿನ್ನೆಲೆ ಪವರ್​​​​​ಮ್ಯಾನ್ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ.

ನಂಜನಗೂಡು ತಾಲೂಕಿನ ರಾಂಪುರ ನಾಲೆ ಬಳಿ ಪವರ್ ಲೈನ್ ಹಾಳಾಗಿತ್ತು, ಇದನ್ನು ಸರಿಮಾಡಲು ಕೆಪಿಟಿಸಿಎಲ್ ನೌಕರ ಮಂಜು ಎಂಬುವವರು ವಿದ್ಯುತ್ ಕಂಬ ಏರಿದ್ದರು. ಈ‌ ಸಂದರ್ಭದಲ್ಲಿ ಸಂತೋಷ್ ಕುಮಾರ್ ಹಾಗೂ ಪವರ್ ಸ್ಟೇಷನ್ ಇನ್​​ಚಾರ್ಜ್ ಪುಟ್ಟರಾಜು ಪವರ್ ಆನ್ ಮಾಡಿಸಿದ್ದು, ಪವರ್​ ಮ್ಯಾನ್​ ಮಂಜುಗೆ ವಿದ್ಯುತ್​ ತಗುಲಿದೆ.

ನಂಜನಗೂಡು ಕೆಪಿಟಿಸಿಎಲ್​​ ಕಾರ್ಯಾಲಯ

ವಿದ್ಯುತ್​ ತಗುಲಿದ್ದರಿಂದಾಗಿ ಕಂಬದಿಂದ ಕೆಳಗೆ ಬಿದ್ದ ಮಂಜು ತಲೆಗೆ ಗಂಭೀರವಾಗಿ ಗಾಯವಾಗಿತ್ತು. ಬಳಿಕ ಆತನನ್ನು ನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸಂತೋಷ್ ಕುಮಾರ್ ಹಾಗೂ ಪುಟ್ಟರಾಜು ಅವರ ಬೇಜವಾಬ್ದಾರಿಯಿಂದ ಪವರ್​​ಮ್ಯಾನ್​​​ಗೆ​​​ ತೀವ್ರ ಗಾಯವಾಗಿದೆ ಎಂದು ಮಂಜು ಪರ ಸಾಮಾಜಿಕ ಹೋರಾಟಗಾರ ಕೃಷ್ಣ ಅವರು ಹುಲ್ಲಹಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಅಧಿಕಾರಿಗಳ ವಿರುದ್ಧ ಎಫ್ಐಆರ್‌ ದಾಖಲಿಸಿದ್ದಾರೆ‌.

ABOUT THE AUTHOR

...view details