ಕರ್ನಾಟಕ

karnataka

ETV Bharat / state

ಗ್ರಾ.ಪಂ ಚುನಾವಣೆ ಮನೆ ಅಡಿಪಾಯದಂತೆ: ಆರ್.ಧ್ರುವನಾರಾಯಣ್ - ವರುಣಾ ವಿಧಾನಸಭಾ ಕ್ಷೇತ್ರ

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಜನ ಪರವಾಗಿ ಕೆಲಸ ಮಾಡಿಲ್ಲ. ಜನವಿರೋಧಿ ಕೆಲಸಗಳನ್ನು ಮಾಡುತ್ತಿದೆ. ಕೃಷಿ, ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಜನರಿಗೆ ಅನ್ಯಾಯ ಮಾಡುತ್ತಿದೆ.

panchayath election
ಕಾಂಗ್ರೆಸ್

By

Published : Dec 12, 2020, 10:33 PM IST

ಮೈಸೂರು: ಗ್ರಾಮ ಪಂಚಾಯ್ತಿ ಚುನಾವಣೆ ಮನೆಯ ಅಡಿಪಾಯದಂತೆ, ಬುಡ ಭದ್ರವಾಗಿರಬೇಕಾದರೆ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಕಾಂಗ್ರೆಸ್ ಕಾರ್ಯಕರ್ತರ ಬಳಿ ಮಾಜಿ ಸಂಸದ ಆರ್.ಧ್ರುವನಾರಾಯಣ್ ಮನವಿ ಮಾಡಿದರು.

ಗ್ರಾಮ ಪಂಚಾಯತ್​ ಚುನಾವಣೆ ಹಿನ್ನೆಲೆಯಲ್ಲಿ ವರುಣಾ ವಿಧಾನಸಭಾ ಕ್ಷೇತ್ರದ ಗ್ರಾಮ್ ಜನಾಧಿಕಾರ ಸರಣಿ ಸಭೆ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಪಂ‌ ಚುನಾವಣೆಯನ್ನ ಗಂಭೀರವಾಗಿ ತೆಗೆದುಕೊಳ್ಳಬೇಕು. ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸ್ಥಾನ ಗೆದ್ದರೆ ಮುಂದಿನ ಚುನಾವಣೆ ನಮಗೆ ಅಡಿಪಾಯ ಒದಗಿಸಿದಂತಾಗುತ್ತದೆ. ಈ ಚುನಾವಣೆ ಪಕ್ಷದ ಅಡಿಪಾಯದ ಚುನಾವಣೆಯಾಗಬೇಕು ಎಂದು ಕಾರ್ಯಕರ್ತರ ಬಳಿ ಮನವಿ ಮಾಡಿದರು.

ಇನ್ನೂ ಓದಿ:ಮೈಸೂರು : ಮೊದಲ ಹಂತದ ಗ್ರಾಪಂ ಚುನಾವಣೆಗೆ 3,307 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಜನಪರವಾಗಿ ಕೆಲಸ ಮಾಡಿಲ್ಲ. ಜನವಿರೋಧಿ ಕೆಲಸಗಳನ್ನು ಮಾಡುತ್ತಿದೆ. ಕೃಷಿ, ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಜನರಿಗೆ ಅನ್ಯಾಯ ಮಾಡುತ್ತಿದೆ. ಉಳುವವನಿಗೆ ಭೂಮಿ ಎನ್ನುತ್ತಿದೆ ಬಿಜೆಪಿ. ಬಿಜೆಪಿಯವರ ಭ್ರಷ್ಟಾಚಾರ ಹಾಗೂ ಜನವಿರೋಧಿ‌ ಕಾಯ್ದೆಗಳ ಬಗ್ಗೆ ಮನವರಿಕೆ ಮಾಡಿ, ಮತಯಾಚಿಸಿ ಎಂದು ಸಲಹೆ ನೀಡಿದರು.

ಗೋವುಗಳ ಬಗ್ಗೆ ಬಿಜೆಪಿಯವರಿಗೆ ಈಗ ಪ್ರೀತಿ ಬಂದಿದೆ. ಅದಕ್ಕೆ ಗೋ ಹತ್ಯೆ ನಿಷೇಧ ಕಾಯ್ದೆ ತಂದಿದ್ದಾರೆ. ಆದರೆ, ಗೋವಾದಲ್ಲಿ ದನದ ಮಾಂಸ ಹೆಚ್ಚು ರಫ್ತು ಮಾಡ್ತಾರೆ. ಬಿಜೆಪಿಯವರು ಇಬ್ಬಂದಿ ನೀತಿ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ABOUT THE AUTHOR

...view details