ಮೈಸೂರು: ದಸರಾ ಉದ್ಘಾಟನಾ ಸಮಾರಂಭಕ್ಕೆ 200 ಜನವೂ ಬೇಡವೆಂದು ಪದ್ಮಶ್ರೀ ಪುರಸ್ಕೃತ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅಭಿಪ್ರಾಯಪಟ್ಟಿದ್ದಾರೆ.
ದಸರಾ ಉದ್ಘಾಟನೆಗೆ 200 ಜನರೂ ಬೇಡ: ಸಾಹಿತಿ ಎಸ್.ಎಲ್.ಭೈರಪ್ಪ
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ಬೆಟ್ಟದಲ್ಲಿ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ 200 ಜನ ಹಾಗೂ ಅರಮನೆಯ 300 ಜನ ಸೇರಿಸಬಾರದು ಎಂದು ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದಸರಾ ಉದ್ಘಾಟನೆಗೆ 200 ಜನರೂ ಬೇಡ: ಸಾಹಿತಿ ಎಸ್.ಎಲ್.ಭೈರಪ್ಪ
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ಬೆಟ್ಟದಲ್ಲಿ ಉದ್ಘಾಟನಾ ಕಾರ್ಯಕ್ರಮಕ್ಕೆ 200 ಜನ ಹಾಗೂ ಅರಮನೆಯ 300 ಜನ ಸೇರಿಸಬಾರದು. ಇದರಿಂದ ತೊಂದರೆ ಉಂಟಾಗಲಿದೆ. ಇನ್ನು ವ್ಯಾಪಾರ ಇಲ್ಲವೆಂದು ಅನುಮತಿ ಕೊಟ್ಟರೆ, ಕಷ್ಟವಾಗಲಿದೆ. ಸರ್ಕಾರ ಈ ಕುರಿತು ನಿರ್ಧಾರ ಕೈಗೊಳ್ಳಬೇಕು. ಜನರು ಅವರ ಮನೆಯಲ್ಲಿಯೇ ದಸರಾ ಆಚರಿಸಿಕೊಳ್ಳಲಿ. ಮಾವುತರು ಜಂಬೂಸವಾರಿ ಮಾಡಲಿ ಎಂದು ಅವರು ಹೇಳಿದರು.