ಮೈಸೂರು:ದೂರದ ಊರಿಗೆ ತಂಗಿಯನ್ನು ಮದುವೆ ಮಾಡಿಕೊಟ್ಟಿದ್ದಕ್ಕೆ ವಿರೋಧ ವ್ಯಕ್ತಪಡಿಸಿ ಮನನೊಂದ ಅಕ್ಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಶ್ರೀರಾಂಪುರ ನಡೆದಿದೆ.
ಲಕ್ಷ್ಮಿ (34) ಮೃತ ದುರ್ದೈವಿ. 12 ವರ್ಷಗಳ ಹಿಂದೆ ಶ್ರೀನಿವಾಸ್ ಎಂಬವರ ಜೊತೆ ವಿವಾಹವಾಗಿದ್ದ ಲಕ್ಷ್ಮಿ, ಕೌಟುಂಬಿಕ ಕಲಹದಿಂದ ಬೇಸತ್ತು ನಾಲ್ಕು ವರ್ಷಗಳಿಂದ ತವರು ಮನೆಯಲ್ಲೇ ವಾಸವಾಗಿದ್ದರು. ಇನ್ನು ತಂಗಿ ಬಿಂದುವಿಗೆ ದೂರದ ಊರಿಗೆ ಮದುವೆ ಮಾಡಬೇಡಿ ಎಂದು ಪೋಷಕರಿಗೆ ಲಕ್ಷ್ಮಿ ಹೇಳಿದ್ದಳು.