ಕರ್ನಾಟಕ

karnataka

ETV Bharat / state

ಮೈಸೂರಿನ ಡಿಎಫ್​ಆರ್​ಎಲ್​ ಸಂಸ್ಥೆಯಿಂದ ಪರಿಸರಸ್ನೇಹಿ ಪ್ಲಾಸ್ಟಿಕ್ ಬ್ಯಾಗ್ ಸಂಶೋಧನೆ - ಪರಿಸರ ಸ್ನೇಹಿ ಪ್ಲಾಸ್ಟಿಕ್ ಬ್ಯಾಗ್ ಸಂಶೋಧಿಸಿದ ಡಿಎಫ್​ಆರ್​ಎಲ್​

ಮೈಸೂರು ನಗರದಲ್ಲಿರುವ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯವು (ಡಿಎಫ್​ಆರ್​ಎಲ್)ಪರಿಸರ ಸ್ನೇಹಿ ಪ್ಲಾಸ್ಟಿಕ್ ಚೀಲ ತಂತ್ರಜ್ಞಾನವನ್ನು ಸಂಶೋಧಿಸಿದೆ.

ಪರಿಸರ ಸ್ನೇಹಿ ಪ್ಲಾಸ್ಟಿಕ್ ಚೀಲ
ಪರಿಸರ ಸ್ನೇಹಿ ಪ್ಲಾಸ್ಟಿಕ್ ಚೀಲ

By

Published : Jun 24, 2022, 7:25 PM IST

ಮೈಸೂರು:ನಗರದಲ್ಲಿರುವ ಡಿಎಫ್ಆರ್​ಎಲ್ ಸಂಸ್ಥೆಯು​ ಪರಿಸರಸ್ನೇಹಿ ಪ್ಲಾಸ್ಟಿಕ್ ಚೀಲದ ಸಂಶೋಧನೆ ಮಾಡಿದ್ದು, ಇದು ಸುಲಭವಾಗಿ ಮಣ್ಣಿನಲ್ಲಿ ಕರಗುತ್ತದೆ. 5 ಕೆ.ಜಿ ಭಾರದ ವಸ್ತುಗಳನ್ನು ಕೊಂಡೊಯ್ಯುವ ಸಾಮರ್ಥ್ಯ ಇದಕ್ಕಿದೆ.


ತಯಾರಿಕೆ ಹೇಗೆ?:ನೈಸರ್ಗಿಕವಾಗಿ ದೊರೆಯುವ ಪಾಲಿ ಲ್ಯಾಕ್ಟಿಕ್ ಆಸಿಡ್ ಪಾಲಿಪೆಟ್​ನಿಂದ ಚೀಲವನ್ನು ತಯಾರಿಸಲಾಗಿದೆ. ಇದೇ ತಂತ್ರಜ್ಞಾನದಲ್ಲಿ ಊಟದ ತಟ್ಟೆ, ಚಮಚ ಹಾಗೂ ಆಹಾರ ಪೊಟ್ಟಣಗಳನ್ನು ಸಿದ್ಧಗೊಂಡಿವೆ. ಬಯೊ ಡಿಗ್ರೇಡಬಲ್ ಚೀಲವು ಪ್ಲಾಸ್ಟಿಕ್ ಬ್ಯಾಗ್‌ನಂತೆ ಕಂಡರೂ 180 ದಿನಗಳಲ್ಲಿ ಸಂಪೂರ್ಣ ಕರಗುತ್ತದೆ.

5 ವರ್ಷ ಸಂಶೋಧನೆ:ಪರಿಸರಸ್ನೇಹಿ ಪ್ಲಾಸ್ಟಿಕ್ ಬ್ಯಾಗ್ ಬಗ್ಗೆ ಡಾ.ಜಾನ್ಸಿ ಜಾರ್ಜ್, ಡಾ.ಎಂ.ಪಾಲ್ ಮುರುಗನ್, ಡಾ.ವಾಸುದೇವನ್ ನೇತೃತ್ವದ 15 ವಿಜ್ಞಾನಿಗಳ ತಂಡ ಸತತವಾಗಿ 5 ವರ್ಷ ಸಂಶೋಧನೆ ನಡೆಸಿದೆ. ಸಾಮಾನ್ಯವಾಗಿ 5 ಕೆ.ಜಿ ಭಾರ ಹೊರುವ ಬಟ್ಟೆಯ ಬ್ಯಾಗಿಗೆ 10 ರಿಂದ 15 ರೂಪಾಯಿ ಇರುತ್ತದೆ. ಡಿಎಫ್​ಆರ್​ಎಲ್ ಕಂಡು ಹಿಡಿದಿರುವ ಪ್ಲಾಸ್ಟಿಕ್ ಬ್ಯಾಗನ್ನು ಕೇವಲ 2 ರೂಪಾಯಿಗಳಿಗೆ ನೀಡಬಹುದು.

ಚಾಮುಂಡಿ ಬೆಟ್ಟಕ್ಕೆ 5 ಸಾವಿರ ಬ್ಯಾಗ್ ಕೊಡುಗೆ: ಚಾಮುಂಡಿ ಬೆಟ್ಟದ ಪ್ರಸಾದ ವಿತರಣೆಗೆ 5 ಸಾವಿರ ಬ್ಯಾಗ್‌ಗಳನ್ನು ನೀಡಲಾಗಿದ್ದು, ಜನರಲ್ಲಿ ಅರಿವು ಮೂಡಿಸುವ ಕೆಲಸ ನಡೆದಿದೆ. ಮುಂದಿನ ದಿನಗಳಲ್ಲಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ, ಶ್ರೀರಂಗಪಟ್ಟಣ ರಂಗನಾಥ ಸ್ವಾಮಿ ದೇವಾಲಯಕ್ಕೆ ಹಾಗೂ ಇತರ ದೇವಾಲಯಗಳಿಗೆ ನೀಡುವ ಉದ್ದೇಶ ಹೊಂದಿದೆ.

ಇದನ್ನೂ ಓದಿ:ನಮ್ಮ ಗಾಳಕ್ಕೆ ಮರಿಮೀನಾದ್ರೂ ಬಿತ್ತಲ್ಲ ಎಂಬ ಸಂತೋಷ ಇದೆ.. ಡಿಕೆಶಿ ವ್ಯಾಖ್ಯಾನದ ಹಿಂದಿದೆ ಕಾರಣ..

For All Latest Updates

TAGGED:

ABOUT THE AUTHOR

...view details