ಮೈಸೂರು :ಹಾಡಿದ್ದೇ ಹಾಡೋ ಕಿಸ್ಬಾಯಿ ದಾಸಯ್ಯ ಎಂಬಂತೆ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದ್ದನ್ನೇ ಪದೇಪದೆ ಹೇಳುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಕಿಡಿಕಾರಿದರು.
ಹೇಳಿದ್ದೇ ಹೇಳೋ ಶ್ರೀನಿವಾಸ್ ಪ್ರಸಾದ್, ಕಿಸ್ಬಾಯಿ ದಾಸಯ್ಯ.. ವಿಶ್ರೀ ವಿರುದ್ಧ ಆರ್‌ಧ್ರು ವ್ಯಂಗ್ಯೋಕ್ತಿ - druvanarayan outrage against srinivas prasad
ಸಿದ್ದರಾಮಯ್ಯನವರು ಸೋತಿರುವುದು ಜೆಡಿಎಸ್ ವಿರುದ್ಧವೇ ಹೊರತು ಬಿಜೆಪಿ ವಿರುದ್ಧ ಅಲ್ಲ. ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಗೆ ಠೇವಣಿ ಕೂಡ ಸಿಕ್ಕಿಲ್ಲ. ಪ್ರಸಾದ್ ಸುಮ್ಮನೆ ಕುಳಿತು ಮಾತನಾಡುವುದಲ್ಲ, ಸಂಸದರಾಗಿ ಎರಡು ವರ್ಷಗಳ ಇವರ ಸಾಧನೆ ಏನು ಎಂಬುದನ್ನು ಮೊದಲು ತಿಳಿಸಬೇಕು..
ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಮುಗಿದು ಮೂರು ವರ್ಷವಾಯಿತು. ಲೋಕಸಭೆ ಚುನಾವಣೆ ಮುಗಿದು ಎರಡು ವರ್ಷಗಳಾಯಿತು. ಅಂದಿನಿಂದಲೂ ಸಂಸದ ಶ್ರೀನಿವಾಸ ಪ್ರಸಾದ್ ಒಂದೇ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದರು. ಸಿದ್ದರಾಮಯ್ಯನವರನ್ನು ಸೋಲಿಸಿದ್ದೇ ಅವರ ಸಾಧನೆ ಎನ್ನುತ್ತಿದ್ದಾರೆ.
ಸಿದ್ದರಾಮಯ್ಯನವರು ಸೋತಿರುವುದು ಜೆಡಿಎಸ್ ವಿರುದ್ಧವೇ ಹೊರತು ಬಿಜೆಪಿ ವಿರುದ್ಧ ಅಲ್ಲ. ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಗೆ ಠೇವಣಿ ಕೂಡ ಸಿಕ್ಕಿಲ್ಲ. ಪ್ರಸಾದ್ ಸುಮ್ಮನೆ ಕುಳಿತು ಮಾತನಾಡುವುದಲ್ಲ, ಸಂಸದರಾಗಿ ಎರಡು ವರ್ಷಗಳ ಇವರ ಸಾಧನೆ ಏನು ಎಂಬುದನ್ನು ಮೊದಲು ತಿಳಿಸಬೇಕು ಎಂದು ಕುಟುಕಿದರು. ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿ ಹೋಗಿ, ಸಚಿವರಾದವರಿಗೆ ಒಳ್ಳೆಯದಾಗುವುದಿಲ್ಲ. ಕಾಂಗ್ರೆಸ್ನಿಂದ ಅವರೆಲ್ಲ ಬೆಳೆದವರು ಎಂದರು.