ಮೈಸೂರು: ದೇವಾಲಯಗಳ ಬಾಗಿಲು ತೆರೆಯಲು ಇನ್ನು ಐದು ದಿನಗಳಷ್ಟೇ ಬಾಕಿ ಇದ್ದು, ದೇವರ ದರ್ಶನ ಪಡೆಯಲು ಭಕ್ತ ಸಮೂಹಕ್ಕೆ ಭಕ್ತಿಯ ಉತ್ಸಾಹ ಹೆಚ್ಚಾಗುತ್ತಿದೆ.
ದೇಗುಲಗಳ ಬಾಗಿಲು ತೆರೆಯಲು ಜೂನ್ 8 ರಿಂದ ಅನುಮತಿ ನೀಡಿರುವ ಕಾರಣ ದಕ್ಷಿಣಕಾಶಿ ಖ್ಯಾತಿಯ ನಂಜನಗೂಡಿನ ನಂಜುಂಡೇಶ್ವರನ ದೇವಾಲಯದ ಬಾಗಿಲ ಮುಂದೆಯೇ ಭಕ್ತರು ನಮಸ್ಕರಿಸಿ ತೆರಳುತ್ತಿದ್ದಾರೆ.
ನಂಜನಗೂಡಿನ ನಂಜುಂಡೇಶ್ವರನ ದೇವಾಲಯ ಇನ್ನು ದೇವಾಲಯಕ್ಕೆ ಭಕ್ತರು ಬಾರದೇ ಇರುವುದರಿಂದ ದೇವಸ್ಥಾನದ ಸುತ್ತಮುತ್ತ ಇರುವ ಹೂ, ಹಣ್ಣು, ಟೀ ಅಂಗಡಿ, ಬಟ್ಟೆ ಅಂಗಡಿಗಳು ಬಾಗಿಲು ಮುಚ್ಚಿದ್ದು, ಭಕ್ತರು ಬಂದರಷ್ಟೇ ಇವರ ವ್ಯಾಪಾರ ವಹಿವಾಟು ನಡೆಯುವುದು. ಲಾಕ್ಡಾನ್ ಘೋಷಣೆಯಾದಾಗಿನಿಂದ ಇಲ್ಲಿಯ ಬೀದಿ ಬದಿ ವ್ಯಾಪಾರಿಗಳ ಸ್ಥಿತಿ ಹೇಳ ತೀರದಾಗಿದೆ.
ಇನ್ನು ಜೂನ್ 8 ರಿಂದ ದೇವಾಲಯಗಳು ತೆರೆಯಲಿದ್ದು ದೇವಾಲಯಗಳಿಂದ ಎಷ್ಟರ ಮಟ್ಟಿಗೆ ಆರ್ಥಿಕ ಸುಧಾರಣೆಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.