ಕರ್ನಾಟಕ

karnataka

ETV Bharat / state

ಮೈಸೂರಲ್ಲಿ ಪಾರಂಪರಿಕ ಆಟಗಳ ಕಲರವ: ಪಗಡೆ ಆಡಿದ್ರು ಸಚಿವ ಸೋಮಣ್ಣ-ಸಂಸದ ಪ್ರತಾಪ ಸಿಂಹ - ಮೈಸೂರು ದಸರಾ ಕಾರ್ಯಕ್ರಮಗಳು

ಕಣ್ಣಾಮುಚ್ಚಾಲೆ, ಕುಂಟಾ ಬಿಲ್ಲೆ, ಹಾವು-ಏಣಿ, ಗೋಲಿ, ಚೌಕಬಾರ, ಮೂರು ಕಾಲಿನ ಓಟ, ಹುಲಿ-ಕುರಿ, ಚೌಕಾಬಾರ ಸೇರಿದಂತೆ ಇನ್ನಿತರ ಪಾರಂಪರಿಕ ಆಟಗಳಲ್ಲಿ ಭಾಗವಹಿಸಿ ಮೈಸೂರಿಗರು ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡರು. ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಪಗಡೆ ಆಡುವ ಮೂಲಕ ಗಮನ ಸೆಳೆದರು.

ಮೈಸೂರು ದಸರಾ ಪಾರಂಪರಿಕ ಆಟಗಳ ಸ್ಪರ್ಧೆ

By

Published : Oct 3, 2019, 12:59 PM IST

ಮೈಸೂರು:ನಾಡಹಬ್ಬದ ನಿಮಿತ್ತ ಸಾಂಸ್ಕೃತಿಕ ನಗರಿ ಕರುನಾಡಿನ ಸಂಪ್ರದಾಯವನ್ನು ಮೆಲುಕು ಹಾಕಲಾಗುತ್ತದೆ. ಅಂತೆಯೇ ನಗರದಲ್ಲಿ ದೇಶಿಯ ಆಟಗಳ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ನಗರದಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ಆಯೋಜಿಸಿದ್ದ ಪಾರಂಪರಿಕ ಆಟಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಸಂಸದ ಪ್ರತಾಪಸಿಂಹ ಅವರು ಪಗಡೆಯಾಡುವ ಮೂಲಕ ಚಾಲನೆ ನೀಡಿದರು‌‌.

ಮೈಸೂರು ದಸರಾ ಪ್ರಯುಕ್ತ ಆಯೋಜಿಸಲಾಗಿದ್ದ ಪಾರಂಪರಿಕ ಆಟಗಳ ಸ್ಪರ್ಧೆ

ಕಣ್ಣಾಮುಚ್ಚಾಲೆ, ಕುಂಟಾ ಬಿಲ್ಲೆ, ಹಾವು-ಏಣಿ, ಗೋಲಿ, ಚೌಕಬಾರ, ಮೂರು ಕಾಲಿನ ಓಟ, ಹುಲಿ-ಕುರಿ, ಚೌಕಾಬಾರ ಸೇರಿದಂತೆ ಇನ್ನಿತರ ಪಾರಂಪರಿಕ ಆಟಗಳಲ್ಲಿ ಹಲವು ಮಂದಿ ಭಾಗವಹಿಸಿ ಅಚ್ಚರಿ ಜೊತೆಗೆ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡರು. ಇನ್ನು ಇದೇ ವೇಳೆ ಸಂಸದ ಪ್ರತಾಪ ಸಿಂಹ ಮತ್ತು ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಪಗಡೆ ಆಟವಾಡಿ ಗಮನ ಸೆಳೆದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಲ್ಯದ ನೆನಪುಗಳು ಮರುಕಳಿಸಿದವು ಎಂದು ಸಂತಸ ವ್ಯಕ್ತಪಡಿಸಿದರು‌.

ಹಗ್ಗ ಕಟ್ಟಾಗಿ ಬಿದ್ದ ಮಹಿಳೆ

ಹಗ್ಗ-ಜಗ್ಗಾಟದ ಉದ್ಘಾಟನೆ ವೇಳೆ ಪಾರಂಪರಿಕ ಆಟಗಳ ಸಮಿತಿ ಸದಸ್ಯೆವೋರ್ವರು ಹಗ್ಗ ತುಂಡಾಗಿದ್ದರಿಂದ ಕೆಳಗೆ ಬಿದ್ದರು. ಹೀಗಾಗಿ ಆಯೋಜಕರ ವಿರುದ್ಧ ಅಸಮಾಧಾನ ವ್ಯಕ್ತವಾಯಿತು.

ABOUT THE AUTHOR

...view details