ಮೈಸೂರು:ಈ ಬಾರಿಯ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಡಿಸೆಂಬರ್ ಎಂಟರಿಂದ ಹದಿನೈದರ ವರೆಗೆ ಭಾರತೀಯತೆ ಎಂಬ ಶೀರ್ಷಿಕೆ ಅಡಿ ನಡೆಯಲಿದೆ ಎಂದು ರಂಗಾಯಣದ ನಿರ್ದೇಶಕ ಅದ್ದಂಡ ಕಾರ್ಯಪ್ಪ ತಿಳಿಸಿದ್ದಾರೆ.
ಇಂದು ರಂಗಾಯಣದಲ್ಲಿ ನಡೆದ ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಂಗಾಯಣದ ನಿರ್ದೇಶಕ ಅದ್ದಂಡ ಕಾರ್ಯಪ್ಪ ಈ ಬಾರಿ ಡಿಸೆಂಬರ್ ಎಂಟರಿಂದ ಹದಿನೈದರ ವರೆಗೆ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ನಡೆಯಲಿದ್ದು ಈ ಬಾರಿ 7 ರಾಜ್ಯಗಳ 7 ವಿವಿಧ ಭಾಷೆಗಳ ಹಾಗೂ ಕರ್ನಾಟಕದ ಕನ್ನಡದ 12 ನಾಟಕಗಳು ಜೊತೆಗೆ ತುಳುವಿನ ಒಂದು ನಾಟಕವು ಸೇರಿ ಒಟ್ಟು 20 ನಾಟಕಗಳು ಬಹುರೂಪಿಯಲ್ಲಿ ಪ್ರದರ್ಶನಗೊಳ್ಳಲಿದೆ ಎಂದರು.
ಇದರ ಜೊತೆಗೆ ಜನಪದ ಕಲಾ ಪ್ರದರ್ಶನ , ರಾಷ್ಟ್ರೀಯ ಚಲನಚಿತ್ರೋತ್ಸವ, ರಾಷ್ಟ್ರೀಯ ವಿಚಾರ ಸಂಕಿರಣ, ಪುಸ್ತಕ ಪ್ರದರ್ಶನ, ಕರಕುಶಲ ವಸ್ತುಗಳ ಪ್ರದರ್ಶನ, ದೇಶೀಯ ಆಹಾರ ಮೇಳ ಹಾಗೂ ಚಿತ್ರಕಲಾ ಶಿಬಿರಗಳು ರಂಗಾಯಣದ ಭೂಮಿಗೀತ, ಕಲಾಮಂದಿರ, ವನರಂಗ, ಬಿ ವಿ ಕಾರಂತ ರಂಗ ಚಾವಡಿ ಹಾಗೂ ಸಂಪತ್ ರಂಗಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದು, ಈ ಬಾರಿಯ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಭಾರತೀಯತೆ ಎಂಬ ಶೀರ್ಷಿಕೆಯ ಅಡಿ ನಡೆಯುತ್ತಿದೆ ಎಂದು ರಂಗಾಯಣದ ನಿರ್ದೇಶಕ ಅದ್ದಂಡ ಕಾರ್ಯಪ್ಪ ತಿಳಿಸಿದರು.