ಮೈಸೂರು: ನಾಳೆ ಹಸೆಮಣೆ ಏರಬೇಕಿದ್ದ ಮದುಮಗ ಇಂದು ಸಾವು ಬದುಕಿನ ನಡುವೆ ಹೋರಾಡುವಂತಾಗಿದೆ. ಈತನ ಬಾವನೇ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ನಾಳೆ ಹಸೆಮಣೆ ಏರಬೇಕಿದ್ದ ಮದುಮಗನ ಮೇಲೆ ಬಾವನಿಂದಲೇ ಮಾರಣಾಂತಿಕ ಹಲ್ಲೆ!
ನಾಳೆ ಹಸೆಮಣೆ ಏರಬೇಕಿದ್ದ ಮದುಮಗ ಇಂದು ಸಾವು ಬದುಕಿನ ನಡುವೆ ಹೋರಾಡುವಂತಾಗಿದೆ. ಈತನ ಬಾವನೇ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ನಾಳೆ ಹಸೆಮಣೆ ಏರಬೇಕಿದ್ದ ಮದುಮಗನ ಮೇಲೆ ಭಾವನಿಂದಲೇ ಮಾರಣಾಂತಿಕ ಹಲ್ಲೆ
ಹೆಚ್.ಡಿ ಕೋಟೆ ತಾಲೂಕಿನ ಎರಹಳ್ಳಿ ಗ್ರಾಮದಲ್ಲಿ ತಡರಾತ್ರಿ ಈ ಘಟನೆ ಸಂಭವಿಸಿದೆ. ನಾಳೆ ಮದುವೆಯಾಗಬೇಕಿದ್ದ ಮನು ಎಂಬ ಯುವಕ ತನ್ನ ಅಕ್ಕನ ಗಂಡ ಕೆಂಡಗಣ್ಣನಿಂದ ಹಲ್ಲೆಗೊಳಗಾದವ. ಮನುವಿನ ತಾಯಿಯ ಮೇಲೂ ಕೆಂಡಗಣ್ಣ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡ ಮನು ಹಾಗೂ ಆತನ ತಾಯಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಹೆಚ್.ಡಿ ಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated : Jan 29, 2020, 11:53 AM IST