ಮೈಸೂರು:ಲಕ್ಷ್ಮಿ ಆನೆ ಗರ್ಭಿಣಿ ಎಂದು ನಿಜವಾಗಿಯೂ ನಮಗೆ ಗೊತ್ತಿಲ್ಲ. ಮನುಷ್ಯರ ರೀತಿಯಲ್ಲಿ ಆನೆಗೆ ಗರ್ಭಿಣಿ ಟೆಸ್ಟ್ ಮಾಡಲು ಯಾವುದೇ ವೈಜ್ಞಾನಿಕ ವಿಧಾನಗಳು ಇಲ್ಲ ಎಂದು ಡಿಸಿಎಫ್ ಕರಿಕಾಳನ್ "ಈಟಿವಿ ಭಾರತ"ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕಳೆದ ರಾತ್ರಿ ರಾಂಪುರ ಆನೆ ಶಿಬಿರದಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಬಂದಿದ ಲಕ್ಷ್ಮಿ ಆನೆ ಗಂಡು ಮರಿಗೆ ಜನ್ಮ ನೀಡಿದ್ದು, ಇದೊಂದು ಸಂತೋಷದ ವಿಚಾರ. "ನಾವು ಆನೆ ಶಿಬಿರಕ್ಕೆ ಆನೆಗಳನ್ನು ಪರೀಕ್ಷಿಸಲು ಹೋದಾಗ ಈ ಆನೆ ಗರ್ಭಿಣಿ ಎಂದು ಗೊತ್ತಿರಲಿಲ್ಲ. ಹಾಗಾಗಿ ದಸರಾದಲ್ಲಿ ಭಾಗವಹಿಸಲು ಈ ಆನೆಯನ್ನು ಆಯ್ಕೆ ಮಾಡಿದ್ದೆವು. ಅಂದು ಸಾಮನ್ಯ ಆನೆಗಳಂತೆ ಲಕ್ಷ್ಮಿ ಆನೆಯ ಚಲನವಲನವಿತ್ತು. ಆದರೆ ನೆನ್ನೆ ಮಧ್ಯಾಹ್ನ ಈ ಆನೆಯ ನಡವಳಿಕೆಯಲ್ಲಿ ಸ್ವಲ್ಪ ಬದಲಾವಣೆ ಕಂಡಿತು. ಕೂಡಲೇ ನಾವು ಈ ಆನೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಡಿಸಿದ ನಂತರ ಗರ್ಭಿಣಿ ಎಂದು ಗೊತ್ತಾಯಿತು. ಕೂಡಲೇ ಕೆಲವು ಟೆಸ್ಟ್ ಸ್ಯಾಂಪಲ್ಗಳನ್ನು ಹೈದರಾಬಾದ್ಗೆ ಕಳುಹಿಸಲಾಯಿತು. ಆದರೆ ರಾತ್ರಿ ಗಂಡು ಮರಿಗೆ ಜನ್ಮ ನೀಡಿದ್ದು ತಾಯಿ ಮತ್ತು ಮರಿ ಆರೋಗ್ಯವಾಗಿವೆ" ಎಂದು ಮಾಹಿತಿ ನೀಡಿದರು.