ಕರ್ನಾಟಕ

karnataka

ETV Bharat / state

ಜಂಬೂಸವಾರಿಗೆ 300 ಜನರಿಗೆ ಮಾತ್ರ ಅವಕಾಶ: ತಜ್ಞರ ಸಮಿತಿ ಶಿಫಾರಸು - ಜಂಬೂಸವಾರಿಗೆ 300 ಜನರಿಗೆ ಮಾತ್ರ ಅವಕಾಶ

ಅಕ್ಟೋಬರ್ 17 ರಂದು ಚಾಮುಂಡಿ ಬೆಟ್ಟದಲ್ಲಿ ನಡೆಯುವ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ 200 ಮಂದಿ ಮಿತಿಗೊಳಿಸಬೇಕು ಎಂದು ಸಲಹಾ ಸಮಿತಿ ತಜ್ಞರ ತಂಡ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

technica team
ತಜ್ಞರ ತಂಡ

By

Published : Oct 9, 2020, 9:51 PM IST

ಮೈಸೂರು:ಈ ಬಾರಿ ಕೊರೊನಾ ಆರ್ಭಟದ ನಡುವೆ ನಾಡಹಬ್ಬ ದಸರಾ ಹಬ್ಬವನ್ನು ಸರಳ ಮತ್ತು ಸಾಂಪ್ರದಾಯಿಕವಾಗಿ ನಡೆಸಲು ರಾಜ್ಯಮಟ್ಟದ ತಾಂತ್ರಿಕ ಸಲಹಾ ಸಮಿತಿ ತಜ್ಞರ ತಂಡ ಕೆಲವು ಶಿಫಾರಸು ಮಾಡಿದೆ.

ಇಂದು ತಾಂತ್ರಿಕ ಸಲಹಾ ಸಮಿತಿಯ ತಂಡದ ಡಾ.ಎಮ್.ಕೆ. ಸುದರ್ಶನ್, ಡಾ.ಲೊಕೇಶ್ ಹಾಗೂ ಡಾ.ಮಹಮೂದ್ ಷರೀಫ್ ತಂಡ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ, ಅಲ್ಲಿ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ನಂತರ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಹಾಗೂ ಅರಮನೆಯಲ್ಲಿ ಜಂಬೂಸವಾರಿ ನಡೆಸುವ ಸ್ಥಳಗಳಿಗೆ ಭೇಟಿ ನೀಡಿದ ತಂಡ ಸುರಕ್ಷತಾ ಸರಳ ದಸರಾ ಆಚರಣೆಗೆ ಸರ್ಕಾರಕ್ಕೆ ಕೆಲವು ಶಿಫಾರಸುಗಳನ್ನು ಮಾಡಿವೆ.

ಅದರಂತೆ ಅಕ್ಟೋಬರ್ 17 ರಂದು ಮುಖ್ಯಮಂತ್ರಿಗಳು ನಾಡಹಬ್ಬ ದಸರಾವನ್ನು ಚಾಮುಂಡಿ ಬೆಟ್ಟದಲ್ಲಿ ಉದ್ಘಾಟನೆ ಮಾಡಲಿದ್ದು, ಅದರಲ್ಲಿ 200 ಜನರಿಗೆ ಅವಕಾಶ, ನಿತ್ಯ ಅಕ್ಟೋಬರ್ 17 ರಿಂದ ಅಕ್ಟೋಬರ್ 24ರ ವರೆಗೆ 8 ದಿನಗಳ ಸಂಜೆ ಅರಮನೆ ಮುಂಭಾಗದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 2 ಗಂಟೆ ಕಾಲಾವಕಾಶ ನಡೆಸಲು ಅದರಲ್ಲಿ 50 ಜನ ಭಾಗವಹಿಸಲು ಶಿಫಾರಸು ಮಾಡಿದ್ದು , ನಿತ್ಯ ದಸರಾ ಸಂದರ್ಭದಲ್ಲಿ ನಗರದ ಅತಿ ಹೆಚ್ಚು ಜನ ಸೇರುವ ಪ್ರದೇಶದಲ್ಲಿ ಪೊಲೀಸ್​ ಭದ್ರತೆ ಮಾಡಬೇಕು, ಸರಳ ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಕೇವಲ 300 ಜನರಿಗೆ ಮಾತ್ರ ಅವಕಾಶ ನೀಡಬೇಕು ಎಂದು ತಜ್ಞರ ಸಮಿತಿ ವರದಿ ನೀಡಿದೆ.

ಈ ಎಲ್ಲ ಕಾರ್ಯಕ್ರಮಗಳಿಗೂ ಕೋವಿಡ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಬೇಕು. ಪೋಲಿಸರು ಫೇಸ್ ಫಿಲ್ಡ್ ಧರಿಸಿ ಕರ್ತವ್ಯ ಹಾಜರಾಗಬೇಕು, ಕೋವಿಡ್ ಹಿನ್ನೆಲೆಯಲ್ಲಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಾಂತ್ರಿಕ ಸಮಿತಿಯ ಸದಸ್ಯರು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಈ ವರದಿ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ದಸರಾ ಉನ್ನತ ಮಟ್ಟದ ಸಮಿತಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದೆ.

ABOUT THE AUTHOR

...view details