ಮೈಸೂರು: ದೀಪಾವಳಿ ಹಬ್ಬದ ಹಿನ್ನೆಲೆ ನಗರದ ದೇವರಾಜ ಹೂವಿನ ಮಾರುಕಟ್ಟೆಯಲ್ಲಿ ಜನರು ಹೂ ಖರೀದಿಗೆ ಮುಗಿಬಿದ್ದಿದ್ದು, ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.
ನರಕ ಚತುರ್ದಶಿ: ಹೂ ಕೊಳ್ಳಲು ದೇವರಾಜ ಮಾರುಕಟ್ಟೆಯಲ್ಲಿ ಮುಗಿಬಿದ್ದ ಜನತೆ - ಕೋವಿಡ್ ನಿಯಮ ಉಲ್ಲಂಘನೆ
ಇಂದು ನರಕ ಚತುರ್ದಶಿ ಹಿನ್ನೆಲೆಯಲ್ಲಿ ನಗರದ ದೇವರಾಜ ಹೂ ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದು, ಕೋವಿಡ್ ನಿಯಮಗಳು ಉಲ್ಲಂಘನೆಯಾಗುತ್ತಿವೆ.
ನರಕ ಚತುರ್ದಶಿ; ಹೂ ಕೊಳ್ಳಲು ದೇವರಾಜ ಮಾರುಕಟ್ಟೆಯಲ್ಲಿ ಮುಗಿಬಿದ್ದ ಜನತೆ
ಇಂದಿನಿಂದ 3 ದಿನಗಳ ಕಾಲ ದೀಪಾವಳಿ ಹಬ್ಬ ಆಚರಣೆಯಿದ್ದು, ಇಂದು ನರಕ ಚತುರ್ದಶಿ ಹಿನ್ನೆಲೆಯಲ್ಲಿ ನಗರದ ದೇವರಾಜ ಹೂ ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಸಾಮಾಜಿಕ ಅಂತರ, ಮಾಸ್ಕ್ ಮರೆತು ವ್ಯಾಪಾರ ವಹಿವಾಟಿನಲ್ಲಿ ತೊಡಗಿರುವ ದೃಶ್ಯಗಳು ಎಲ್ಲೆಡೆ ಕಂಡು ಬಂದವು. ಹೂಗಳ ಬೆಲೆ ಜಾಸ್ತಿಯಿದ್ದರೂ ವ್ಯಾಪಾರ ಜೋರಾಗಿಯೇ ಇದೆ.