ಮೈಸೂರು :ಒಂದು ವರ್ಷದಿಂದ ಗಿರಿಜನ ಆಶ್ರಮ ಶಾಲೆಗಳ ಗುತ್ತಿಗೆ ಶಿಕ್ಷಕರಿಗೆ ಸಂಬಳ ಸಿಗದೇ ಇರುವುದರಿಂದ ಅವರ ಬದುಕು ಅತಂತ್ರವಾಗಿದೆ. ರಾಜ್ಯದ 116 ಆಶ್ರಮ ಶಾಲೆಯಲ್ಲಿ ಸುಮಾರು 350 ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದಾರೆ.
ವರ್ಷಗಳಿಂದ ಬಾರದ ಗೌರವಧನ.. ಅತಂತ್ರರಾದ ಗುತ್ತಿಗೆ ಶಿಕ್ಷಕರು.. - ಮೈಸೂರು ಸುದ್ದಿ
ಕೆಎಟಿ ಆದೇಶದಲ್ಲಿ ನಮಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ, ಖಾಯಂ ಶಿಕ್ಷಕರಂತೆ ಇತರೆ ಸೌಲಭ್ಯಗಳನ್ನು ನೀಡಬೇಕು ಎಂದು ಆದೇಶಿಸಿಲಾಗಿದೆ. ಆದರೆ, ಇಲಾಖೆ ಈ ಆದೇಶವನ್ನು ಜಾರಿ ಮಾಡದೇ ನಮ್ಮ ಜೀವನದಲ್ಲಿ ಚೆಲ್ಲಾಟವಾಡುತ್ತಿರುವುದು ಅತ್ಯಂತ ಶೋಚನೀಯ..
ಆದರೆ, ಕಳೆದ ಒಂದು ವರ್ಷದಿಂದ ಯಾವುದೇ ವೇತನವಾಗಲಿ, ಪ್ಯಾಕೇಜ್ಗಳು ಇಲ್ಲದೆ ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆಯು ಯಾವುದೇ ಆದೇಶ ನೀಡದೇ ಇರುವುದು ಗುತ್ತಿಗೆ ಶಿಕ್ಷಕರ ಬೇಸರಕ್ಕೆ ಕಾರಣವಾಗಿದೆ.
ಶಿಕ್ಷಕ ಕೆಲಸಕ್ಕೆ ತಕ್ಕ ವಿದ್ಯಾರ್ಹತೆಯನ್ನು ಹೊಂದಿದ್ದಾರೆ. ಕೆಎಟಿ ಆದೇಶದಲ್ಲಿ ನಮಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ, ಖಾಯಂ ಶಿಕ್ಷಕರಂತೆ ಇತರೆ ಸೌಲಭ್ಯಗಳನ್ನು ನೀಡಬೇಕು ಎಂದು ಆದೇಶಿಸಿಲಾಗಿದೆ. ಆದರೆ, ಇಲಾಖೆ ಈ ಆದೇಶವನ್ನು ಜಾರಿ ಮಾಡದೇ ನಮ್ಮ ಜೀವನದಲ್ಲಿ ಚೆಲ್ಲಾಟವಾಡುತ್ತಿರುವುದು ಅತ್ಯಂತ ಶೋಚನೀಯ ಎಂದು ನೊಂದ ಶಿಕ್ಷಕರು ಹೇಳಿಕೊಂಡಿದ್ದಾರೆ.