ಕರ್ನಾಟಕ

karnataka

ETV Bharat / state

ಮೈಸೂರು ಡಿಸಿ ಸಿಂಧೂರಿ ವಿರುದ್ಧ ಅಸಮಾಧಾನ.. ಪಾಲಿಕೆ ಆಯುಕ್ತೆ ಶಿಲ್ಪಾನಾಗ್​ ರಾಜೀನಾಮೆ

ಸಿಎಸ್‌ಆರ್​​ ಫಂಡ್‌ನಿಂದ ನಾವು ಕೆಲಸ ಮಾಡುತ್ತಿದ್ದೇವೆ. ಎಲ್ಲರಿಗೂ ಒಂದು ಸಹನೆ ಇರುತ್ತೆ, ಸಹನೆ ಒಡೆದಾಗ ಏನು ಮಾಡಬೇಕು..? ಒಬ್ಬರು ಐಎಎಸ್ ಅಧಿಕಾರಿಯಾಗಿ ಮತ್ತೊಬ್ಬ ಅಧಿಕಾರಿ ಮೇಲೆ ದಬ್ಬಾಳಿಕೆ ಮಾಡೋದು ಎಷ್ಟು ಸರಿ ಅಂತ ಅಸಮಾಧಾನ ಹೊರ ಹಾಕಿದ್ದಾರೆ.

ಡಿಸಿ ಸಿಂಧೂರಿ ವಿರುದ್ಧ ಶಿಲ್ಪಾನಾಗ್​ ಆರೋಪ
ಡಿಸಿ ಸಿಂಧೂರಿ ವಿರುದ್ಧ ಶಿಲ್ಪಾನಾಗ್​ ಆರೋಪ

By

Published : Jun 3, 2021, 5:07 PM IST

Updated : Jun 3, 2021, 9:44 PM IST

ಮೈಸೂರು:ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಬೇಸರ ವ್ಯಕ್ತಪಡಿಸಿ ಸುದ್ದಿಗೋಷ್ಠಿಯಲ್ಲೇ ಕಣ್ಣೀರು ಹಾಕಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಏನು ಕೆಲಸ ಮಾಡಿಲ್ಲ ಎಂಬ ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಸಿಂಧೂರಿ ವಿರುದ್ಧ ಆರೋಪಿಸಿದ್ದಾರೆ.

ಸಿಟಿಗೆ ಒಂದು ಮಾನದಂಡ, ಗ್ರಾಮಾಂತರಕ್ಕೆ ಒಂದು ಮಾನದಂಡ ಮಾಡಿದ್ದಾರೆ. ಸಿಟಿಯಲ್ಲಿ ಕಮಿಷನರ್ ವಿಫಲವಾಗಿದ್ದಾರೆ ಅಂತಾರೆ. ಜಿಲ್ಲಾಧಿಕಾರಿ ಈ ರೀತಿ ಹೇಳುತ್ತಿದ್ದಾರೆ.
ಏನೂ ಕೆಲಸ ಮಾಡಿಲ್ಲ ಎಂಬ ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಡಳಿತದಿಂದ‌ ನಮಗೆ ಯಾವುದೇ ಸಹಕಾರ ದೊರೆತಿಲ್ಲ ಎಂದು ಆಯುಕ್ತೆ ಶಿಲ್ಪಾನಾಗ್​, ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಡಿಸಿ ಸಿಂಧೂರಿ ವಿರುದ್ಧ ಅಸಮಾಧಾನ ಹೊರಹಾಕಿದ ಆಯುಕ್ತೆ ಶಿಲ್ಪಾನಾಗ್​​​

‘ನನ್ನನ್ನು ತುಳಿಯುವ ವ್ಯವಸ್ಥಿತ ಪಿತೂರಿ’

ಸಿಎಸ್‌ಆರ್​​ ಫಂಡ್‌ನಿಂದ ನಾವು ಕೆಲಸ ಮಾಡುತ್ತಿದ್ದೇವೆ. ಎಲ್ಲರಿಗೂ ಒಂದು ಸಹನೆ ಇರುತ್ತೆ, ಸಹನೆ ಒಡೆದಾಗ ಏನು ಮಾಡಬೇಕು..? ಒಬ್ಬರು ಐಎಎಸ್ ಅಧಿಕಾರಿಯಾಗಿ ಮತ್ತೊಬ್ಬ ಅಧಿಕಾರಿ ಮೇಲೆ ದಬ್ಬಾಳಿಕೆ ಮಾಡೋದು ಎಷ್ಟು ಸರಿ ಅಂತ ಅಸಮಾಧಾನ ಹೊರ ಹಾಕಿದ್ದಾರೆ.

ನನ್ನನ್ನ ತುಳಿಯುವ ವ್ಯವಸ್ಥಿತ ಪಿತೂರಿ ನಡೆದಿದೆ. ಅವರ ಈಗೋದಿಂದ ನಾವು ಮಾಡುವ ಕೆಲಸಕ್ಕೆ ಮನ್ನಣೆ ಸಿಗುತ್ತಿಲ್ಲ. ಮಾಧ್ಯಮಗಳಲ್ಲಿ ಪಾಲಿಕೆ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂಬ ವರದಿ ಬಂದ ಹಿನ್ನೆಲೆ ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ನನಗೆ ಕೆಲಸ ಮಾಡುವ ಆಸಕ್ತಿಯೇ ಇಲ್ಲದಂತಾಗಿದೆ ಎಂದು ಶಿಲ್ಪಾನಾಗ್​ ಬೇಸರದಿಂದ ನುಡಿದಿದ್ದಾರೆ.

ಡಿಸಿ ಸಿಂಧೂರಿ ವಿರುದ್ಧ ಅಸಮಾಧಾನ ಹೊರಹಾಕಿದ ಆಯುಕ್ತೆ ಶಿಲ್ಪಾನಾಗ್​​​

‘ಮೈಸೂರು ಜಿಲ್ಲೆ ಬಿಟ್ಟು ತೊಲಗಿ’

ಅವರು ತುಂಬಾ ಚೀಪ್ ಮೆಂಟಾಲಿಟಿ ಅಧಿಕಾರಿ, ಇಂತಹವರು ಮೈಸೂರಿನಂಥ ಜಿಲ್ಲೆಯಲ್ಲಿ ಇರಬಾರದು. ಯಾಕೆ ಈ ರೀತಿ ಹಠ ಮಾಡುತ್ತಿದ್ದಾಳೋ ಗೊತ್ತಿಲ್ಲ, ನನ್ನ ಮೇಲೆ ದ್ವೇಷ ಇದ್ರೆ ನನ್ನ ಮೇಲೆ ಸಾಧಿಸಲಿ. ನಾನು 2014ನೇ ಬ್ಯಾಚ್ ಅಧಿಕಾರಿ, ಅವ್ರು 2009ನೇ ಬ್ಯಾಚ್ ಅಧಿಕಾರಿ ಎಂದಿದ್ದಾರೆ.

ನಾನು ಬೇಸರದಿಂದ ಹೇಳುತ್ತಿದ್ದೇನೆ ಇಂತಹ ಅಧಿಕಾರಿ ಯಾವ ಜಿಲ್ಲೆಗೂ ಬೇಡ. ನನಗೆ ಆ ಜಾತಿ, ಈ ಜಾತಿ ಅಂತ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ನಾನು ಕರ್ನಾಟಕದವಳಾದರೂ ಇಲ್ಲೇ ಹುದ್ದೆ ಕೊಡಿ ಎಂದು ಕೇಳಿದವಳಲ್ಲ. ನಾನು ಇಷ್ಟು ಸೌಮ್ಯ ಸ್ವಭಾವದಿಂದ ಇದ್ದರೂ ನನ್ನ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

‘ಮೈಸೂರಿಗೆ ಕಳಂಕ ತರಬೇಡಿ’

ಮೈಸೂರು ಜನರ ಮೇಲೆ ಅದು ಪರಿಣಾಮ ಬೀರುವುದು ಬೇಡ. ನಾನು ರಾಜೀನಾಮೆ ಕೊಟ್ಟು ಬೇರೆ ಜೀವನ ನಡೆಸುತ್ತೇನೆ‌. ಕೋವಿಡ್​​ ಫಂಡ್‌ನಿಂದ ಬಂದ ಮೆಡಿಕಲ್, ಫುಡ್ ಕಿಟ್‌ಗಳನ್ನ ಬೀಗ ಒಡೆದು ತಗೆದುಕೊಂಡು ಹೋಗೋದು ಎಷ್ಟು ಸರಿ..? ನಾನು ಯಾವತ್ತೋ ನೋಟಿಸ್ ಕೊಡಬಹುದಿತ್ತು. ಆದರೆ, ನಾನು ಸಹನೆಯಿಂದಲೇ ಬಂದಿದ್ದೆ. ಡಿಸಿ ಜಿಮ್, ಸ್ವಿಮಿಂಗ್ ಫೂಲ್ ಬಗ್ಗೆ, ಪಾಲಕೆ ವತಿಯಿಂದ ನೋಟಿಸ್ ನೀಡಬಹುದಲ್ಲ‌. ನನ್ನ ಮೇಲೆ ಫೈಟ್ ಮಾಡಲಿ ನಾನು ಫೈಟ್ ಮಾಡ್ತಾ ಇದ್ದೆ. ಆದ್ರೆ ಪಾಲಿಕೆಯ ತಳ ಹಂತದ ಅಧಿಕಾರಿಗಳನ್ನ ಟಾರ್ಗೆಟ್ ಮಾಡುವುದನ್ನ ನಾನು ಸಹಿಸೋದಿಲ್ಲ ಎಂದಿದ್ದಾರೆ.

Last Updated : Jun 3, 2021, 9:44 PM IST

ABOUT THE AUTHOR

...view details