ಕರ್ನಾಟಕ

karnataka

ETV Bharat / state

ವಿದ್ಯುತ್ ದೀಪಾಲಂಕಾರ ಇನ್ನೂ ಒಂಬತ್ತು ದಿನಕ್ಕೆ ವಿಸ್ತರಣೆ : ಸಿಎಂ ಬಸವರಾಜ ಬೊಮ್ಮಾಯಿ - ದಸರಾ ವಿದ್ಯುತ್ ದೀಪಾಲಂಕಾರದ ಬಗ್ಗೆ ಬಸವರಾಜ ಬೊಮ್ಮಾಯಿ ಹೇಳಿಕೆ

ನಾನು ಕೂಡ ಸಮಯವಾದರೆ ದೀಪಾಲಂಕಾರ ವೀಕ್ಷಣೆ ಮಾಡುತ್ತೇನೆ. ನಾಡಿನಲ್ಲಿ ಮಳೆ, ಬೆಳೆಯಾಗಲಿ. ರಾಜ್ಯ ಸುಭೀಕ್ಷೆಯಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ..

cm-basavaraja-bommai met sutturu shri
ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ಸಿಎಂ

By

Published : Oct 15, 2021, 6:40 PM IST

ಮೈಸೂರು :ದಸರಾ ವಿದ್ಯುತ್ ದೀಪಾಲಂಕಾರ ಮುಂದುವರೆಸುವಂತೆ ಬೇಡಿಕೆ ಬರುತ್ತಿದೆ. ಪ್ರವಾಸಿಗರು ದೀಪಾಲಂಕಾರ ವೀಕ್ಷಣೆ ಮಾಡುತ್ತಿರುವುದರಿಂದ ಇನ್ನೂ ಒಂಬತ್ತು ದಿನಗಳವರೆಗೆ ದೀಪಾಲಂಕಾರ ವಿಸ್ತರಣೆ ಮಾಡಲಾಗುವುದು ‌ಎಂದು ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ‌ ತಿಳಿಸಿದ್ದಾರೆ.

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಕುಟುಂಬ ಸಮೇತರಾಗಿ ಅವರು ಭೇಟಿ ನೀಡಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕೂಡ ಸಮಯವಾದರೆ ದೀಪಾಲಂಕಾರ ವೀಕ್ಷಣೆ ಮಾಡುತ್ತೇನೆ. ನಾಡಿನಲ್ಲಿ ಮಳೆ, ಬೆಳೆಯಾಗಲಿ. ರಾಜ್ಯ ಸುಭೀಕ್ಷೆಯಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದರು.

ಸಂಸದರಾದ ವಿ. ಶ್ರೀನಿವಾಸ್ ಪ್ರಸಾದ್, ಪ್ರತಾಪಸಿಂಹ, ಸಚಿವ ಎಸ್ ಟಿ ಸೋಮಶೇಖರ್, ಶಾಸಕ ಜಿ ಟಿ ದೇವೇಗೌಡ, ಎಲ್. ನಾಗೇಂದ್ರ ಮತ್ತಿತರರ ಗಣ್ಯರು ಹಾಜರಿದ್ದರು.

ಓದಿ:ಉಪಲೋಕಾಯುಕ್ತರ ಹುದ್ದೆಗೆ ನೇಮಕ ಪ್ರಕ್ರಿಯೆ ಆರಂಭಿಸಿದ ಸರ್ಕಾರ : ಹೈಕೋರ್ಟ್​​ಗೆ ಅನುಪಾಲನಾ ವರದಿ

ABOUT THE AUTHOR

...view details