ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರೀತಿಯ ಬಸವ ಸಾವನ್ನಪ್ಪಿದೆ. ಒಂದು ತಿಂಗಳಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಬಸವ ಆರೋಗ್ಯದಲ್ಲಿ ಚೇತರಿಕೆಯಾಗದೆ ಕೆ.ಆರ್.ನಗರ ತಾಲೂಕಿನ ಕಾಳಮ್ಮನ ಕೊಪ್ಪಲು ಗ್ರಾಮದಲ್ಲಿ ಕೊನೆಯುಸಿರೆಳೆಯಿತು.
'ಯಜಮಾನ'ನ ಪ್ರೀತಿಯ ಬಸವ ಇನ್ನಿಲ್ಲ, ಕೆ.ಆರ್.ನಗರ ಕಾಳಮ್ಮನ ಕೊಪ್ಪಲಿನಲ್ಲಿ ಸಾವು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರೀತಿಯ ಬಸವ ಸಾವನ್ನಪ್ಪಿದೆ. ಒಂದು ತಿಂಗಳಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಬಸವ ಆರೋಗ್ಯದಲ್ಲಿ ಚೇತರಿಕೆ ಕಾಣದೆ ಇಹಲೋಕ ತ್ಯಜಿಸಿದೆ.
ಚಾಲೆಂಜಿಂಗ್ ಸ್ಟಾರ್ ಪ್ರೀತಿಯ ಬಸವ ಇನ್ನಿಲ್ಲ
ಕಳೆದ ಮಂಡ್ಯ ಲೋಕಸಭಾ ಚುನಾವಣಾ ವೇಳೆಯಲ್ಲಿ ಕೆ.ಆರ್.ನಗರ ತಾಲೂಕು ಸಾಲಿಗ್ರಾಮ ಹೋಬಳಿ ಕಾಳಮ್ಮನ ಕೊಪ್ಪಲು ಗ್ರಾಮಕ್ಕೆ ಸಂಸದೆ ಸುಮಲತಾ ಪರ ಚುನಾವಣಾ ಪ್ರಚಾರಕ್ಕೆ ದರ್ಶನ್ ಆಗಮಿಸಿದ್ದರು. ಈ ವೇಳೆ ಅವರ ಜೀಪ್ ಮುಂದೆ ಹೋಗದಂತೆ ಅಡ್ಡಲಾಗಿ ಗ್ರಾಮದ ಬಸವ ನಿಂತಿತ್ತು.
ನಂತರ ದರ್ಶನ್ ತಾವೇ ಸ್ವತಃ ಜೀಪ್ನಿಂದ ಇಳಿದು ಬಸವನ ಮೈ ಸವರಿದಾಗ ಮುಂದೆ ಹೋಗಲು ಅವಕಾಶ ಮಾಡಿ ಕೊಟ್ಟಿದೆ. ನಂತರ ದರ್ಶನ್ ಬಿಡುವು ದಿನಗಳಲ್ಲಿ ಬಂದು ಬಸವನ ಆರೈಕೆ ಮಾಡುವುದಾಗಿ ತಿಳಿಸಿದ್ದರು.
Last Updated : Jun 5, 2020, 12:26 PM IST