ಕರ್ನಾಟಕ

karnataka

ETV Bharat / state

ಹಿಂದೂ ಸಮಾಜವನ್ನು ಹೆದರಿಸುವ, ಬೆದರಿಸುವ ಕೆಲಸ ನಡೆಯುತ್ತಿದೆ: ಚಕ್ರವರ್ತಿ ಸೂಲಿಬೆಲೆ - etv bharat kannada

ಹಿಂದೂ ಸಮಾಜವನ್ನು ಬೆದರಿಸುವವರಿಗೆ ತಕ್ಕ ಉತ್ತರ ಕೊಡಬೇಕಿದೆ ಎಂದು ಚಕ್ರವರ್ತಿ ಸೂಲಿಬೆಲೆ ಕರೆ ಕೊಟ್ಟರು.

ಚಕ್ರವರ್ತಿ ಸೂಲಿಬೆಲೆ
ಚಕ್ರವರ್ತಿ ಸೂಲಿಬೆಲೆ

By

Published : Jul 19, 2023, 10:36 AM IST

ಮೈಸೂರು: ಹಿಂದೂ ಸಮಾಜವನ್ನು ಹೆದರಿಸುವ, ಬೆದರಿಸುವ ಕೆಲಸ ಆಗುತ್ತಿದೆ. ಇದಕ್ಕೆ ನಾವೆಲ್ಲ ಸೇರಿ ತಕ್ಕ ಉತ್ತರ ಕೊಡಬೇಕು ಎಂದು ಯುವ ಬ್ರಿಗೇಡ್ ಅಧ್ಯಕ್ಷ ಚಚಕ್ರವರ್ತಿ ಸೂಲಿಬೆಲೆ ಹೇಳಿದರು. ತಿ.ನರಸೀಪುರ ತಾಲ್ಲೂಕಿನಲ್ಲಿ ಮಂಗಳವಾರ ಏರ್ಪಡಿಸಿದ್ದ ವೇಣುಗೋಪಾಲ್ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ವೀರ ಕೇಸರಿ ಅಂತ ಅಭಿಯಾನ ಮಾಡಿದ್ದೆವು. ವಿವೇಕಾನಂದರ ಸ್ಟಿಕ್ಕರ್ ಹಾಕಿ 2 ರೂ. ಪಡೆಯಬೇಕು ಅಂತ ಸೂಚನೆ ಕೊಟ್ಟಿದ್ದೆವು. ವೇಣುಗೋಪಾಲ್ ನಾಯಕ್ ತನ್ನ ಮನೆ ಮೇಲೆ 'ಸಾವು ಖಾತ್ರಿ, ವೀರನಂತೆ ಸಾಯುವುದು ಒಳ್ಳೆಯದು' ಅಂತ ಸ್ಟಿಕ್ಕರ್ ಹಾಕಿಕೊಂಡಿದ್ದ ಎಂದು ಸ್ಮರಿಸಿದರು.

ಇದೇ ವೇಳೆ, ಶ್ರದ್ಧಾಂಜಲಿ ಸಭೆಗೆ ಅನುಮತಿ ನಿರಾಕರಿಸಿರುವ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ನಮ್ಮದೇ ಹುಡುಗನ ಸಾವಿಗೆ ಶ್ರದ್ಧಾಂಜಲಿ ಸಭೆ ಮಾಡಲು ಅನುಮತಿ ಸಿಗಲ್ಲ ಅಂದ್ರೆ ಯಾವ ಸಮಾಜದಲ್ಲಿ ನಾವಿದ್ದೇವೆ?. ಇವರು ಕೊಲೆ ಮಾಡಿದವರಿಗಿಂತ ಕ್ರೂರಿ ಜನ. ಕಂಬನಿ ಸುರಿಸಲು ಜಾಗ ಕೊಡಲ್ಲ ಅಂದರೆ ಏನು ಹೇಳಬೇಕು? ಎಂದರು. ವೇಣುಗೋಪಾಲ್ ಮನೆ ಹತ್ತಿರ 20 ಜನ ಸೇರಿ ಶ್ರದ್ಧಾಂಜಲಿ ಮಾಡಿಕೊಳ್ಳಿ ಎಂದಿದ್ದರು. ನಾವು ಹೈಕೋರ್ಟ್‌ಗೆ ಹೋಗಿ ಹೋರಾಡಿ ಪರ್ಮಿಷನ್ ತರಬೇಕಾಯ್ತು ಎಂದು ಬೇಸರ ವ್ಯಕ್ತಪಡಿಸಿದರು.

ಮುಂದಿನ ವರ್ಷ ತಿ.ನರಸೀಪುರದಲ್ಲಿ ಹನುಮ ಜಯಂತಿ ಇನ್ನೂ ಅದ್ದೂರಿಯಾಗಿ ನಡೆಯಬೇಕು. ವೇಣುಗೋಪಾಲ್‌ನಂತಹ ಹುಡುಗರು ಹನುಮ ಜಯಂತಿಗೋಸ್ಕರವೇ ಹುಟ್ಟಿಕೊಂಡಿದ್ದರು. ವೇಣುಗೋಪಾಲ್ ಸಾವು ಸ್ವಲ್ಪ ದಿನಕ್ಕೆ ಮರೆತು ಹೋಗಬಹುದು. ಹೀಗೆ ಮರೆತು ಹೋಗುವ ಪ್ರವೃತ್ತಿ ಬೆಳೆದರೆ ಅಪಾಯಕಾರಿ. ವೇಣುಗೋಪಾಲ್ ಸಾವು ಮರೆತು ಹೋಗಲು ಬಿಡಬಾರದು. ಆತ ಹಣತೆ ಹಚ್ಚಿದ್ದಾನೆ. ನಾವು ಆ ಹಣತೆಗೆ ತೈಲ ಆಗಬೇಕು‌ ಎಂದು ಕಿವಿಮಾತು ಹೇಳಿದರು.

ವೇಣುಗೋಪಾಲ್ ನಾಯಕ್ ಅವರ ಪತ್ನಿ ಪೂರ್ಣಿಮಾ ಮಾತನಾಡಿ, ನನ್ನ ಗಂಡ ನಾಲ್ಕೈದು ವರ್ಷದಿಂದ ಹಿಂದೂ ಸಮಾಜದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಕಪಿಲಾರತಿ, ನದಿ ಸ್ವಚ್ಛತೆ, ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡಿದ್ದೆವು. ಎಲ್ಲ ಕಾರ್ಯಕ್ರಮಗಳಿಗೂ ನಾನೂ ಹೋಗುತ್ತಿದ್ದೆ. ಈ ಬಾರಿಯ ಹನುಮ ಜಯಂತಿ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು. ಹನುಮ ಜಯಂತಿ ಮುಗಿದ ಮರುದಿನ ನನ್ನ ಗಂಡನ ಜತೆ ಜಗಳ ಮಾಡಿದ್ದರು. ಕಾಂಪ್ರಮೈಸ್‌ಗೆ ಅಂತ ಕರೆದು ಗಂಡನನ್ನು ಕೊಲೆ ಮಾಡಿದ್ದಾರೆ. ಒಂದು ಕಾಲ್ ಮಾಡಿದ್ದರೆ 50 ಜನ ಹುಡುಗರು ನನ್ನ ಗಂಡನೊಂದಿಗೆ ಬರುತ್ತಿದ್ದರು. ನನ್ನ ಕೈಯಿಂದ ಊಟ ಮಾಡಿ ಹೋಗಿದ್ದೇ ಕೊನೆ, ಮತ್ತೆ ಬರಲೇ ಇಲ್ಲ ಎಂದು ಕಣ್ಣೀರು ಹಾಕಿದರು. ಮದುವೆಯಾಗಿ ಏಳು ವರ್ಷ ಆಯ್ತು. ನಾನು, ನನ್ನ ಮಗಳು ಏನು ಮಾಡಬೇಕು? ಎಲ್ಲಿಗೆ ಹೋಗಬೇಕು? ಧರ್ಮ ಕಾರ್ಯ ಮಾಡುವ ಹಾಗೆಯೇ ಇಲ್ವಾ ಅವರು ಎಂದು ಪ್ರಶ್ನಿಸಿದರು‌. ಜಾತಿ ನಿಂದನೆ ಮಾಡಿದ್ದಾರೆ, ಮನೆಗೆ ನುಗ್ಗುತ್ತೇವೆ ಅಂತೆಲ್ಲ ಬೆದರಿಕೆ ಹಾಕಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.

ಇದನ್ನೂ ಓದಿ:ಎರಡು ಗುಂಪುಗಳ ನಡುವೆ ಗಲಾಟೆ: ಯುವಕನ ಹತ್ಯೆ

ABOUT THE AUTHOR

...view details