ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಟಿಕೆಟ್ ಸಿಕ್ಕಿರುವುದಕ್ಕೆ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಖುಷಿಯಾಗಿದ್ದು ಮಾಧ್ಯಮಗಳಿಗೆ ಹಾಗೂ ಪಕ್ಷದ ವರಿಷ್ಠರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಎರಡೂ ಪಕ್ಷದ ನಾಯಕರ ಬೆಂಬಲದಿಂದ ಗೆಲ್ಲುವೆ- ಮೈತ್ರಿ ಅಭ್ಯರ್ಥಿ ವಿಜಯಶಂಕರ್ ವಿಶ್ವಾಸ - ಮೈಸೂರು
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮನ್ವಯ ಕೊರತೆಯಿಂದ ನಿನ್ನೆ ಕರೆದ ಪತ್ರಿಕಾಗೋಷ್ಠಿ ರದ್ದಾಗಲಿಲ್ಲ. ಅಭ್ಯರ್ಥಿ ಯಾರು ಎಂದು ಅಧಿಕೃತವಾಗಿ ಘೋಷಣೆಯಾಗದ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿತ್ತು.
ವಿಜಯಶಂಕರ್
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮನ್ವಯ ಕೊರತೆಯಿಂದ ನಿನ್ನೆ ಕರೆದ ಪತ್ರಿಕಾಗೋಷ್ಠಿ ರದ್ದಾಗಲಿಲ್ಲ. ಅಭ್ಯರ್ಥಿ ಯಾರು ಎಂದು ಅಧಿಕೃತವಾಗಿ ಘೋಷಣೆಯಾಗದ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿತ್ತು.
ಕಾಂಗ್ರೆಸ್ ಪಕ್ಷದ ವರಿಷ್ಠರು ನನ್ನ ಹೆಸರು ಅಂತಿಮಗೊಳಿಸಿರುವುದರಿಂದ ನಾಳೆ ಎರಡು ಪಕ್ಷದ ಮುಖಂಡರು ನಾಮಪತ್ರ ಸಲ್ಲಿಕೆ ವೇಳೆಗೆ ಆಗಮಿಸಲಿದ್ದಾರೆ ಎಂದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಣತಂತ್ರ ರೂಪಿಸಲು ಸಭೆ ನಡೆಯಲಿದೆ ಎಂದು ತಿಳಿಸಿದರು.