ಮೈಸೂರು: ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ರಕ್ಷಣೆಗಾಗಿ ಅವುಗಳ ಶೆಡ್ಗಳ ಮುಂಭಾಗ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದು, ಚಲವಲನ ಹಾಗೂ ಅಪರಿಚಿತರು ಆನೆಗಳ ಬಳಿ ಹೋಗದಂತೆ ಕಟ್ಟೆಚ್ಚರ ವಹಿಸಲಾಗುತ್ತಿದೆ.
ಮೈಸೂರು ದಸರಾ: ಗಜಪಡೆಗೆ ಸಿಸಿಟಿವಿ ಕಣ್ಗಾವಲು - ಈಟಿವಿ ಭಾರತ ಕನ್ನಡ
ದಸರಾ ಗಜಪಡೆಯ ರಕ್ಷಣೆ ಮತ್ತು ಚಲನವಲನಗಳಿಗಾಗಿ ಶೆಡ್, ಶಿಬಿರ, ಆಹಾರ ಘಟಕಗಳಲ್ಲಿ ಸಿಸಿಟಿವಿಗಳನ್ನು ಹಾಕಲಾಗಿದೆ.
ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾಗಿರುವ ಗಜಪಡೆಯ ತಾಲೀಮು ಹಾಗೂ ಅವುಗಳ ಪೋಷಣೆಗೆ ಅರಮನೆ ಮುಂಭಾಗದ ಕೋಡಿ ಸೋಮೇಶ್ವರ ದೇವಾಲಯದ ಬಳಿ 9 ಆನೆಗಳಿಗಾಗಿ 3 ಶೆಡ್ಗಳನ್ನು ನಿರ್ಮಿಸಲಾಗಿದ್ದು, ಅದರಲ್ಲಿ ಜಂಬೂ ಸವಾರಿಯ ಕ್ಯಾಪ್ಟನ್ ಅಭಿಮನ್ಯು ಹಾಗೂ ಕುಮ್ಕಿ ಆನೆ ಚೈತ್ರಗೆ ಪ್ರತ್ಯೇಕ ಶೆಡ್ ನಿರ್ಮಿಸಲಾಗಿದೆ. ಶಿಬಿರದಲ್ಲಿರುವ ಅರ್ಜುನ, ಭೀಮ, ಗೋಪಾಲಸ್ವಾಮಿ, ಮಹೇಂದ್ರ ಆನೆಗಳು ಹಾಗು ಮೂರನೇ ಶೆಡ್ನಲ್ಲಿರುವ ಧನಂಜಯ, ಕಾವೇರಿ ಮತ್ತು ಲಕ್ಷ್ಮೀ ಆನೆಗಳನ್ನು ಸಿಸಿಟಿವಿ ಕಣ್ಗಾವಲಿನಲ್ಲಿ ಇರಿಸಲಾಗಿದೆ. ಸಿಸಿಟಿವಿ ದೃಶ್ಯಗಳನ್ನು ಡಿಸಿಎಫ್ ಕಾರಿಕಾಳನ್ ಹಾಗೂ ಆರ್ ಎಫ್ ಓ ಸಂತೋಷ್ ಊಗಾರ್ ಅವರ ಮೊಬೈಲ್ ನಲ್ಲೂ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ:ಮೇವು ನೀಡಿ ಎಂದು ಮಾವುತರಿಗೆ ಸನ್ನೆ ಮಾಡಿದ ಅರ್ಜುನ: ವಿಡಿಯೋ