ಮೈಸೂರು: ಪ್ರತ್ಯೇಕ 2 ಹುಕ್ಕಾ ಸೆಂಟರ್ಗಳ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಕೋಟ್ಪಾ ಕಾಯ್ದೆಯಡಿ ಇಬ್ಬರನ್ನು ಬಂಧಿಸಿ 62 ಸಾವಿರ ರೂ. ದಂಡ ವಿಧಿಸಿದ್ದಾರೆ.
ಹುಕ್ಕಾ ಸೆಂಟರ್ಗಳ ಮೇಲೆ ಸಿಸಿಬಿ ದಾಳಿ.. ಇಬ್ಬರ ಬಂಧನ.. 62 ಸಾವಿರ ರೂ. ದಂಡ
ಮೈಸೂರಿನಲ್ಲಿ ಪ್ರತ್ಯೇಕ 2 ಹುಕ್ಕಾ ಸೆಂಟರ್ಗಳ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಕೋಟ್ಪಾ ಕಾಯ್ದೆಯಡಿ ಇಬ್ಬರನ್ನು ಬಂಧಿಸಿ 62 ಸಾವಿರ ರೂ. ದಂಡ ವಿಧಿಸಿದ್ದಾರೆ.
ಕಾಳಿದಾಸ ರಸ್ತೆಯಲ್ಲಿರುವ 18 ಪ್ಲಸ್ ಐಸ್ ಕೆಫೆಯಲ್ಲಿ ಅಪ್ರಾಪ್ತರಿಗೆ ಮತ್ತು ಪ್ರಾಪ್ತರಿಗೆ ಹುಕ್ಕಾ ಮತ್ತು ಸಿಗರೇಟ್ ಸೇವನೆಗೆ ಅವಕಾಶ ಮಾಡಿಕೊಟ್ಟು ಹುಕ್ಕಾ ಬಾರ್ ನಡೆಸುತ್ತಿದ್ದರು ಎಂಬ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಕೆಫೆಯ ಮ್ಯಾನೇಜರ್ ರಾಘವೇಂದ್ರ ಮತ್ತು ನಗರದ ಜೆಎಸ್‌ಎಸ್ ಲೇಔಟ್‌ನ ಹೆಚ್ ಪಿ ಪುರುಷೋತ್ತಮ್ ಎಂಬುವರ ವಿರುದ್ಧ ಕೋಟ್ಪಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ. 31 ಸಾವಿರ ರೂ.ದಂಡ ವಿಧಿಸಿ, ಪರಿಕರಗಳನ್ನು ಜಪ್ತಿ ಮಾಡಿ, ಹುಕ್ಕಾ ಬಾರ್ ಮುಚ್ಚಿಸಲಾಗಿದೆ.
ಅದೇ ರೀತಿ, ಲಲಿತ ಮಹಲ್ ಹೆಲಿಪ್ಯಾಡ್ ಎದುರು ದೇವರಾಜ ಡಾಬಾದ ಪಕ್ಕದಲ್ಲಿರುವ ಚಾರ್‌ಕೋಲ್ ಸರ್ಕ್ಯೂಟ್ ಕೆಫೆ ಮತ್ತು ರೆಸ್ಟೋರೆಂಟ್ ಮೇಲೆ ದಾಳಿ ಮಾಡಲಾಗಿದೆ. ಕೆಫೆಯ ಮ್ಯಾನೇಜರ್ ಟಿ ಕೆ ಲೇಔಟ್ ನಿವಾಸಿ ಲೋಹಿತ್ ವಿರುದ್ದ ಕೋಟ್ಪಾ ಕಾಯ್ದೆಯಡಿ ಕ್ರಮ ಕೈಗೊಂಡು 30,800 ರೂ.ದಂಡ ವಿಧಿಸಿ, ಪರಿಕರಗಳನ್ನು ಜಪ್ತಿ ಮಾಡಿ ಹುಕ್ಕಾ ಬಾರ್ ಮುಚ್ಚಿಸಲಾಗಿದೆ.