ಕರ್ನಾಟಕ

karnataka

ETV Bharat / state

ಮಾಜಿ ಸಿಎಂ ಸಿದ್ದರಾಮಯ್ಯ ಪರಮಾಪ್ತನ ವಿರುದ್ಧ ದೂರು ದಾಖಲು - ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಪ. ಮಲ್ಲೇಶ್​ ವಿರುದ್ಧ ಬ್ರಾಹ್ಮಣ ಸಂಘಟನೆಗಳ ಒಕ್ಕೂಟ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

case-filed-against-siddaramaiahs-aide
ಮಾಜಿ ಸಿಎಂ ಸಿದ್ದರಾಮಯ್ಯ ಪರಮಾಪ್ತನ ವಿರುದ್ಧ ದೂರು ದಾಖಲು

By

Published : Nov 17, 2022, 11:02 PM IST

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಹಾಗೂ ಪ್ರಗತಿಪರ ಚಿಂತಕ ಪ.ಮಲ್ಲೇಶ್ ವಿರುದ್ಧ ದೂರು ದಾಖಲಾಗಿದೆ. ಸಮುದಾಯವೊಂದರ ಬಗ್ಗೆ ಸಾರ್ವಜನಿಕವಾಗಿ ಆಕ್ಷೇಪ ಮತ್ತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಆ ಸಮುದಾಯದ ಸಂಘಟನೆಗಳ ಒಕ್ಕೂಟ ದೂರು ದಾಖಲಿಸಿದೆ.

ಪ.ಮಲ್ಲೇಶ್ ಅವರು ವೇದ ಹಾಗೂ ಉಪನಿಷತ್ತುಗಳ ಬಗ್ಗೆ ಕೆಟ್ಟ ಅಭಿರುಚಿಯಿಂದ ಲಘುವಾಗಿ ಮಾತನಾಡಿದ್ದಾರೆ. ಮಠಾಧೀಶರನ್ನು ಕೂಡ ಅವಹೇಳನ ಮಾಡಿರುವ ಪ.ಮಲ್ಲೇಶ್ ಮೇಲೆ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ. ಜಾತಿ ನಿಂದನೆ ಸೇರಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ವಿಚಾರವನ್ನು ಸೇರಿಸಿ 153ಎ, 295, 295ಎ ಕಲಂನ ಅಡಿ ದೂರು ದಾಖಲಿಸಲು ಕೋರಲಾಗಿದೆ.

ಇದನ್ನೂ ಓದಿ :ಸಂಘ ಪರಿವಾರ ಯಾವತ್ತೂ ಅಂಬೇಡ್ಕರರ ಸಂವಿಧಾನ ಒಪ್ಪಿಕೊಂಡಿಲ್ಲ: ಸಿದ್ದರಾಮಯ್ಯ

ABOUT THE AUTHOR

...view details