ಕರ್ನಾಟಕ

karnataka

ETV Bharat / state

ಹುಣಸೂರು ಉಪಚುನಾವಣೆ​: ಮೂರೂ ಪಕ್ಷಗಳಿಗೆ ಪ್ರತಿಷ್ಠೆ, ಯಾರಿಗೆ ವಿಜಯಮಾಲೆ?

ರಾಜ್ಯದ ಉಪಚುನಾವಣೆಯಲ್ಲಿ ಹೆಚ್ಚು ಗಮನ ಸೆಳೆದಿರುವ ಕ್ಷೇತ್ರಗಳಲ್ಲಿ ಹುಣಸೂರು ಕ್ಷೇತ್ರವೂ ಒಂದು. ಇಲ್ಲಿನ ಪ್ರಚಾರಕ್ಕೆ ಎರಡು ರಾಷ್ಟ್ರೀಯ ಪಕ್ಷಗಳ ಹಾಗೂ ಪ್ರದೇಶಿಕ ಪಕ್ಷದ ಪ್ರಮುಖ ನಾಯಕರಿಗೆ ಪ್ರತಿಷ್ಠೆಯಾಗಿದೆ. ಇಲ್ಲಿ ಮತದಾರರು ಯಾರಿಗೆ ಮಣೆ ಹಾಕಿದ್ದಾರೆ ಎಂಬುದು ಸದ್ಯದಲ್ಲೇ ತಿಳಿಯಲಿದೆ.

by-election campaign in hunasuru
ಹುಣಸೂರು ಉಪಚುನಾವಣೆ ಕ್ಷೇತ್ರ

By

Published : Dec 8, 2019, 11:54 PM IST

ಮೈಸೂರು: ನವೆಂಬರ್​ 5 ರಂದು ಚುನಾವಣೆ ನೀತಿ ಸಂಹಿತೆ ಜಾರಿಯಾದಾಗಿನಿಂದ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಒಬ್ಬರ, ಮೇಲೊಬ್ಬರು ಕಟುವಾಗಿ ಟೀಕಿಸುತ್ತ, ನಮ್ಮನ್ನೇ ಗೆಲ್ಲಿಸಿ ಎಂದು ಮತದಾರರ ವೋಲೈಕೆಗೆ ಹಲವು ತಂತ್ರಗಳನ್ನು ಪ್ರಯೋಗಿಸಿದ್ದರು.

ಚುನಾವಣೆ ಮತಯಾಚನೆ ವೇಳೆ, ಈ ಕ್ಷೇತ್ರದಲ್ಲಿನ ಬಿಜೆಪಿ ಅಭ್ಯರ್ಥಿ ಹೆಚ್​ ವಿಶ್ವನಾಥ್​ ಅವರನ್ನು ಸುಪ್ರೀಂಕೋರ್ಟ್ ಅನರ್ಹ ಎಂದು ಹೇಳಿದೆ. ಇವರನ್ನು ಸೋಲಿಸಲು ಮತದಾರರು ಮುದ್ರೆ ಒತ್ತುವುದೊಂದೇ ಬಾಕಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಬ್ಬರಿಸಿದ್ದರು‌.

ಸಿಎಂ ಬಿ.ಎಸ್. ಯಡಿಯೂರಪ್ಪ, ಅವರು ವಿಶ್ವನಾಥ್ ಅವರ ಅಪೇಕ್ಷೆಯಂತೆ ಕೆಲಸ ಮಾಡುತ್ತೇನೆ. ಇವರನ್ನು ಗೆಲ್ಲಿಸಿ ಕಳುಹಿಸಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದರು.

ಇನ್ನು, ಜೆಡಿಎಸ್​ ಏನು ಕಡಿಮೆ ಇಲ್ಲ ಎಂಬಂತೆ, ರಾಜ್ಯದಲ್ಲಿ ಧ್ರುವೀಕರಣವಲ್ಲ‌, ಶುದ್ಧೀಕರಣವಾಗಬೇಕು. ಅನರ್ಹರಿಗೆ ತಕ್ಕ ಪಾಠ ಕಲಿಸಿ ಎಂದು ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ ಹೆಚ್‌.ಡಿ. ಕುಮಾರಸ್ವಾಮಿ ಗುಡುಗಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್, ಬಿಜೆಪಿಯ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಹಾಗೂ ಜೆಡಿಎಸ್​ನಿಂದ ಕಣಕ್ಕಿಳಿದಿರುವ ಸೋಮಶೇಖರ್ ಅವರಿಗೆ ಡಿ.9ರಂದು ಪ್ರಕಟಗೊಳ್ಳುವ ಫಲಿತಾಂಶ ಸ್ಪಷ್ಟ ಉತ್ತರ ನೀಡಲಿದೆ.

ಪುರುಷರು 1,14,580, ಮಹಿಳೆಯರು 1,13,388 ಇತರೆ 6 ಸೇರಿ ಒಟ್ಟು ಮತದಾರ ಸಂಖ್ಯೆ 2,27,974 ಪೈಕಿ ಶೇಕಡಾ 80.59ರಷ್ಟು ಮತದಾನವಾಗಿದೆ. ಒಟ್ಟು 1,83,731 ಮತದಾರು ಮತ ಚಲಾಯಿಸಿದ್ದಾರೆ. ಅಚ್ಚರಿಯ ಫಲಿತಾಂಶಕ್ಕೆ ರಾಜಕೀಯ ಮುಖಂಡರಷ್ಟೇ ಅಲ್ಲ. ಮತದಾರರು ಕೂಡ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ.

ABOUT THE AUTHOR

...view details