ಕರ್ನಾಟಕ

karnataka

ETV Bharat / state

ನಾಪತ್ತೆಯಾಗಿದ್ದ ಬುಲೆಟ್​ಗಳು ಕಪಿಲಾ ನದಿಯಲ್ಲಿ ಪತ್ತೆ!

ಪೊಲೀಸ್ ಠಾಣೆಯ ರೈಟರ್ ಆಗಿದ್ದ ಕೃಷ್ಣೇಗೌಡ ಕದ್ದ ಬುಲೆಟ್​ಗಳನ್ನ ನಂಜನಗೂಡಿನ ಕಪಿಲಾ ನದಿಯಲ್ಲಿ ಎಸೆದು ಸಿಕ್ಕಿ ಬಿದ್ದಿದ್ದಾನೆ.

kapila
kapila

By

Published : Jun 10, 2020, 10:40 AM IST

Updated : Jun 10, 2020, 11:03 AM IST

ಮೈಸೂರು: ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿದ್ದ ಬುಲೆಟ್​ಗಳು ನಂಜನಗೂಡು ತಾಲೂಕಿನ ಕಪಿಲೆ ನದಿಯಲ್ಲಿ ಪತ್ತೆಯಾಗಿದೆ.

ಠಾಣೆಯ ರೈಟರ್ ಆಗಿದ್ದ ಕೃಷ್ಣೇಗೌಡ ಕದ್ದ ಬುಲೆಟ್​ಗಳನ್ನ ನಂಜನಗೂಡು ಕಪಿಲಾ ನದಿಯಲ್ಲಿ ಎಸೆದು ಸಿಕ್ಕಿ ಬಿದ್ದಿದ್ದಾನೆ.

ಕಪಿಲಾ ನದಿಯಲ್ಲಿ ಬುಲೆಟ್​ಗಳು ಪತ್ತೆ

ಬುಲೆಟ್ ನಾಪತ್ತೆಯಾದ ಪ್ರಕರಣದಡಿಯಲ್ಲಿ ಕೃಷ್ಣೇಗೌಡನನ್ನ ಅಮಾನತು ಮಾಡಿ, ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸತ್ಯ ಹೊರಬಂದಿದೆ.

50 ಬುಲೆಟ್​ಗಳು ಠಾಣೆಯ ದಾಸ್ತಾನು ಕೊಠಡಿಯಿಂದ ನಾಪತ್ತೆಯಾಗಿತ್ತು. ಕಪಿಲಾ ನದಿಯಲ್ಲಿ 20 ಬುಲೆಟ್​ಗಳು ಸಿಕ್ಕಿದ್ದು, ಇನ್ನುಳಿದ 30 ಬುಲೆಟ್​ಗಳಿಗಾಗಿ ನುರಿತ ಈಜು ತಜ್ಞರು ಶೋಧ ನಡೆಸುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನ‌ ಅಮಾನತು ಪಡಿಸಲಾಗಿತ್ತು. ಕೃಷ್ಣೇಗೌಡನ ಮೇಲೆ ತೀವ್ರ ಶಂಕೆ ಇತ್ತು. ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆತ್ಮಹತ್ಯೆ ನಾಟಕವಾಡಿ, ಚೆಳ್ಳೆಹಣ್ಣು ತಿನ್ನಿಸಲು ಯತ್ನಿಸಿದ್ದ ಕೃಷ್ಣೇಗೌಡ ಸಿಕ್ಕಿ ಬಿದ್ದಿದ್ದಾನೆ.

ತನಿಖಾಧಿಕಾರಿ ಅಡಿಷನಲ್ ಎಸ್ಪಿ‌ ಸ್ನೇಹ ನೇತೃತ್ವದಲ್ಲಿ ನಡೆದ ಬುಲೆಟ್​ಗಳ ಶೋಧನಾ ಕಾರ್ಯ ಮುಂದುವರಿದಿದೆ.

Last Updated : Jun 10, 2020, 11:03 AM IST

ABOUT THE AUTHOR

...view details