ಮೈಸೂರು: ಅಣ್ಣ ಮೃತಪಟ್ಟ ಅರ್ಧ ಗಂಟೆಯಲ್ಲೇ ತಮ್ಮನೂ ಸಾವನ್ನಪ್ಪಿರುವ ಘಟನೆ ತಿ.ನರಸೀಪುರ ತಾಲೂಕಿನ ಹಿಂಡವಾಳು ಗ್ರಾಮದಲ್ಲಿ ನಡೆದಿದೆ.
ಅಣ್ಣನ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಮೃತಪಟ್ಟ ತಮ್ಮ: ಸಾವಿನಲ್ಲೂ ಒಂದಾದ ಸಹೋದರರು
ಅಣ್ಣ ಮೃತಪಟ್ಟ ಅರ್ಧ ಗಂಟೆಯೊಳಗೆ ತಮ್ಮ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ನಡೆದಿದ್ದು, ಸಾವಿನಲ್ಲೂ ಸಹೋದರರಿಬ್ಬರು ಒಂದಾಗಿದ್ದಾರೆ.
ಅಣ್ಣನ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಮೃತಪಟ್ಟ ತಮ್ಮ
ಜಿಲ್ಲೆಯ ತಿ.ನರಸೀಪುರ ತಾಲೂಕಿನ ಹಿಂಡವಾಳು ಗ್ರಾಮದ ದೊಡ್ಡಯ್ಯ (72) ಅನಾರೋಗ್ಯದಿಂದ ಮೃತಪಟ್ಟ ಅರ್ಧ ಗಂಟೆ ಅಂತರದಲ್ಲೇ ಸಹೋದರ ಸಿದ್ದಯ್ಯ (66) ಅಣ್ಣನ ಸಾವಿನ ಸುದ್ದಿ ತಿಳಿದು ಹೃದಯಘಾತದಿಂದ ಮೃತಪಟ್ಟಿದ್ದಾನೆ.
ಸಾವಿನಲ್ಲೂ ಒಂದಾದ ಸಹೋದರರಿಗೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸಂತಾಪ ಸೂಚಿಸಿದ್ದು, ಇಬ್ಬರ ಅಂತ್ಯಕ್ರಿಯೆಯೂ ಒಂದೇ ಕಡೆ ನೆರವೇರಿಸಲಾಗಿದೆ.