ಮೈಸೂರು:ನಿಯಂತ್ರಣ ತಪ್ಪಿ ಪೊಲೀಸ್ ಜೀಪ್ವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎಎಸ್ಐ ಮತ್ತು ಕಾನ್ಸ್‌ಟೇಬಲ್ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಕೆ.ಆರ್. ನಗರದಲ್ಲಿ ನಡೆದಿದೆ.
ಸ್ಥಳದಲ್ಲೇ ಎಎಸ್ಐ, ಕಾನ್ಸ್‌ಟೇಬಲ್ ಸಾವು ಕೆ.ಆರ್. ನಗರ ಪೊಲೀಸ್ ಠಾಣೆಯ ಎಎಸ್ಐ ಮೂರ್ತಿ ಹಾಗೂ ಜೀಪ್ ಚಾಲಕ ಕಾನ್ಸ್‌ಟೇಬಲ್ ಶಾಂತಕುಮಾರ್ ಅಪಘಾತದಿಂದ ಮೃತಪಟ್ಟಿದ್ದಾರೆ. ಬುಧವಾರ ರಾತ್ರಿ ಕರ್ತವ್ಯದಲ್ಲಿದ್ದಾಗ, ಸಾಲಿಗ್ರಾಮ ಪೊಲೀಸ್ ಠಾಣೆಯ ಕಡೆಯಿಂದ ಕೆ.ಆರ್. ನಗರದ ಕಡೆಗೆ ಬರುತ್ತಿದ್ದರು.
ಸ್ಥಳದಲ್ಲೇ ಎಎಸ್ಐ, ಕಾನ್ಸ್‌ಟೇಬಲ್ ಸಾವು ಇಂದು ನಸುಕಿನಜಾವ ಬೆಳಗ್ಗೆ 3ರ ಸಮಯದಲ್ಲಿ ಸಿದ್ದನಕೊಪ್ಪಲು ಗೇಟ್ ಸಮೀಪ ಜೀಪ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಎಎಸ್ಐ ಮೂರ್ತಿ ಮತ್ತು ಕಾನ್ಸ್‌ಟೇಬಲ್ ಶಾಂತಕುಮಾರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಎಸ್ ಪಿ ರಿಷ್ಯಂತ್, ಸೌತ್ ಡಿವೈಎಸ್ಪಿ ಸುಮಿತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತರ ಶವಗಳನ್ನು ಕೆ.ಆರ್. ನಗರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದರು.
ಸ್ಥಳದಲ್ಲೇ ಎಎಸ್ಐ, ಕಾನ್ಸ್‌ಟೇಬಲ್ ಸಾವು ಈ ಘಟನೆ ಕುರಿತು ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.