ಮೈಸೂರು: ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಯುವತಿಯನ್ನು, ಕೊಲೆಗೈದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಶಿಕ್ (28) ಬಂಧಿತ ಆರೋಪಿ. ಕೊಲೆಗೀಡಾದ ಅಪೂರ್ವ ಶೆಟ್ಟಿ (21) ಹಾಗೂ ಆಶಿಕ್ ಪ್ರೀತಿಸುತ್ತಿದ್ದರು.
ವಿಜಯನಗರದ ಪಿಜಿಯೊಂದರಲ್ಲಿ ವಾಸ್ತವ್ಯ ಹೂಡಿದ್ದ ಅಪೂರ್ವ ಶೆಟ್ಟಿ, ಮೂರು ದಿನಗಳ ಕಾಲ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಪ್ರಿಯಕರನೊಂದಿಗೆ ವಾಸ್ತವ್ಯ ಹೂಡಿದ್ದಳು. ಇದೇ ಸಂದರ್ಭದಲ್ಲಿ ಇಬ್ಬರ ನಡುವೆ ಗಲಾಟೆ ನಡೆದು, ಅಪೂರ್ವ ಶೆಟ್ಟಿ ಮೇಲೆ ಹಲ್ಲೆ ನಡೆಸಿದ ಆಶಿಕ್, ಬಳಿಕ ಕತ್ತು ಹಿಸುಕಿ ಕೊಲೆಗೈದು ಪರಾರಿಯಾಗಿದ್ದನು.