ಮೈಸೂರು: ಮಾಜಿ ಶಾಸಕ ಸಿ ರಮೇಶ್ ಮತ್ತು ಸಂಸದ ಶ್ರೀನಿವಾಸ್ ಪ್ರಸಾದ್ ಅವರು ಏಕವಚನದಲ್ಲೇ ಪರಸ್ಪರ ಬೈದಾಡಿಕೊಂಡಿರುವ ಘಟನೆ ನಡೆದಿದೆ. ನರಸೀಪುರ ಅತಿಥಿ ಗೃಹ ಉದ್ಘಾಟನೆ ಕಾರ್ಯಕ್ರಮದಲ್ಲಿ, 'ಸಿ ರಮೇಶ್ ಅವರನ್ನು ಆಚೆ ಕಳುಹಿಸಿ. ಬರೀ ಕೀಟಲೆ ಮಾಡಲು ಬರ್ತಿಯಾ?' ಎಂದು ಶ್ರೀನಿವಾಸ್ ಪ್ರಸಾದ್ ಗದರಿದ್ದಾರೆ.
ಅತಿಥಿಗೃಹ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕ-ಸಂಸದರ ವಾಗ್ವಾದ - ಮಾಜಿ ಶಾಸಕ ಸಿ ರಮೇಶ್
ಮಾಜಿ ಶಾಸಕ ಸಿ ರಮೇಶ್ ಮತ್ತು ಸಂಸದ ಶ್ರೀನಿವಾಸ್ ಪ್ರಸಾದ್ ಅವರು ಮಾತಿಗೆ ಮಾತು ಬೆಳೆಸಿ ಪರಸ್ಪರ ಏಕವಚನದಲ್ಲೇ ಬೈದುಕೊಂಡ ಪ್ರಸಂಗ ನಡೆದಿದೆ.
ಮಾಜಿ ಶಾಸಕ-ಸಂಸದರ ವಾಗ್ವಾದ
ಇದಕ್ಕೆ ಕೋಪದಲ್ಲೇ ಪ್ರತಿಕ್ರಿಯಿಸಿದ ರಮೇಶ್, 'ಇದು ಬಿಜೆಪಿ ಸರ್ಕಾರದ ಕಾರ್ಯಕ್ರಮ. ನನ್ನನ್ನು ಅವಮಾನ ಮಾಡಲೆಂದೇ ಕರೆದೆಯಾ?, ಮತ್ತೊಮ್ಮೆ ನನ್ನನ್ನು ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಬೇಡ. ಇನ್ನು ಮುಂದೆ ಯಾವುದೇ ಕಾರ್ಯಕ್ರಮಗಳಿಗೆ ನಾನು ಬರುವುದಿಲ್ಲ. ನಿನ್ನನ್ನು ಸುಮ್ಮನೆ ಬಿಡುವುದಿಲ್ಲ' ಎಂದರು.
ಇದ್ನೂ ಓದಿ:ವಿಜಯಪುರ ನಗರ ಕ್ಷೇತ್ರದಲ್ಲಿ ಧೈರ್ಯ ಇದ್ದವರು ನಿಲ್ಲಲಿ : ಯತ್ನಾಳ್ ಸವಾಲ್
Last Updated : Nov 17, 2022, 8:51 AM IST