ಕರ್ನಾಟಕ

karnataka

ETV Bharat / state

ಮೈಸೂರಿಗೆ ಚುನಾವಣಾ ನೀತಿ ಸಂಹಿತೆ ವಿಸ್ತರಿಸಿ: ಡಿಸಿಗೆ ಕೆಪಿಸಿಸಿ, ಡಿಸಿಸಿ ಮನವಿ - ಜಿಲ್ಲಾಧಿಕಾರಿಗಳಿಗೆ ಮನವಿ

ಹುಣಸೂರು ಉಪ ಚುನಾವಣೆಗೆ ನೀತಿ ಸಂಹಿತೆಯನ್ನು ಹುಣಸೂರಿಗೆ ಮಾತ್ರ ಸೀಮಿತಗೊಳಿಸಿರುವುದನ್ನು ರದ್ದು ಪಡಿಸಿ ಇಡೀ ಮೈಸೂರು ಜಿಲ್ಲೆಗೆ ನೀತಿ ಸಂಹಿತೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕೆಪಿಸಿಸಿ ಹಾಗೂ ಡಿಸಿಸಿಯಿಂದ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಕೆಪಿಸಿಸಿ ವಕ್ತಾರರು

By

Published : Sep 24, 2019, 8:10 PM IST

ಮೈಸೂರು:ಹುಣಸೂರು ಉಪ ಚುನಾವಣೆಗೆ ನೀತಿ ಸಂಹಿತೆಯನ್ನು ಹುಣಸೂರಿಗೆ ಮಾತ್ರ ಸೀಮಿತಗೊಳಿಸಿರುವುದನ್ನು ರದ್ದು ಪಡಿಸಿ ಇಡೀ ಜಿಲ್ಲೆಗೆ ನೀತಿ ಸಂಹಿತೆ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕೆಪಿಸಿಸಿ ಹಾಗೂ ಡಿಸಿಸಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಕೆಪಿಸಿಸಿ ವಕ್ತಾರರು ಹಾಗೂ ಡಿಸಿಸಿ ನಿಯೋಗ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಅವರನ್ನು ಭೇಟಿಯಾಗಿ ಹುಣಸೂರು ಉಪ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆಯನ್ನು ಹುಣಸೂರು ವ್ಯಾಪ್ತಿಗೆ ಸೀಮಿತಗೊಳಿಸಿರುವುದನ್ನು ರದ್ದುಪಡಿಸಬೇಕು. ಜಿಲ್ಲೆಗೆ ಪೂರ್ಣ ನೀತಿ ಸಂಹಿತೆಯನ್ನು ಜಾರಿಗೊಳಿಸಬೇಕು ಎಂದು ರಾಷ್ಟ್ರೀಯ ಚುನಾವಣಾ ಆಯೋಗಕ್ಕೆ ದೂರು ಕಳುಹಿಸುವಂತೆ ಜಿಲ್ಲಾಧಿಕಾರಿಗಳಿಗೆ ತಮ್ಮ ದೂರನ್ನು ಸಲ್ಲಿಸಿದರು.

ಈ ದೂರಿನಲ್ಲಿ ಸದ್ಯ ಬಿಜೆಪಿ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರು ಆಪರೇಷನ್ ಕಮಲದ ರೀತಿ ಆಪರೇಷನ್ ಓಟರ್ಸ್ ಮೂಲಕ ಹುಣಸೂರು ಉಪ ಚುನಾವಣೆಯನ್ನು ಗೆಲ್ಲಲು ಸರ್ಕಾರದ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸುವ ಸಾಧ್ಯತೆ ಇದೆ. ಆದ್ದರಿಂದ ಇಡೀ ಜಿಲ್ಲೆಗೆ ನೀತಿ ಸಂಹಿತೆಯನ್ನು ವಿಸ್ತರಿಸಬೇಕೆಂದು ಮನವಿ ಮಾಡಿದರು.

ABOUT THE AUTHOR

...view details