ಕರ್ನಾಟಕ

karnataka

ETV Bharat / state

ತ್ಯಾಗಮಯಿ ಅತಿಥಿಗಳಿಗೆ ಅವಕಾಶ ಸಿಗಲಿ, ನನಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರವಿಲ್ಲ: ಶಾಸಕ ರಾಮದಾಸ್ - ramdasnews

ಸಚಿವ ಸ್ಥಾನ ಸಿಗದಿದ್ದಕ್ಕೆ ನನಗೆ ಬೇಸರವಿಲ್ಲವೆಂದು ಶಾಸಕ ಎಸ್.ಎ.ರಾಮದಾಸ್ ಮೈಸೂರಿನಲ್ಲಿ ಹೇಳಿದ್ದಾರೆ.

ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರವಿಲ್ಲ

By

Published : Aug 31, 2019, 2:35 PM IST

ಮೈಸೂರು:ನಮಗೋಸ್ಕರ ತ್ಯಾಗಮಾಡಿದ ಅತಿಥಿಗಳಿಗೆ ಮೊದಲ ಆದ್ಯತೆ ನೀಡಬೇಕು. ನನಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ನನಗೆ ಬೇಸರವಿಲ್ಲವೆಂದು ಶಾಸಕ ಎಸ್.ಎ.ರಾಮದಾಸ್ ಹೇಳಿದ್ದಾರೆ.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ರಚನೆ ಮಾಡಲು ಹಲವು ಅತಿಥಿಗಳು ಕಾರಣರಾಗಿದ್ದಾರೆ. ಅವರಿಗೆ ಆತಿಥ್ಯ ಕೊಡಬೇಕು. ಮುಂದಿನ ದಿನಗಳಲ್ಲಿ ನೋಡಬೇಕಿದೆ ಎಂದರು. ಮೈಸೂರು ಭಾಗದಿಂದ ಮೈಸೂರು ಜಿಲ್ಲೆಗೆ ಒಬ್ಬ ಸಚಿವ ನೇಮಕ ಮಾಡಿದ್ದಕ್ಕೆ ಬೇಸರವಾಗಿಲ್ಲ. ಟೀಂ ಕ್ಯಾಪ್ಟನ್ ಬಿ.ಎಸ್.ಯಡಿಯೂರಪ್ಪ ಅವರು ಯಾರನ್ನು ಬ್ಯಾಟಿಂಗ್ ಇಳಿಸುತ್ತಾರೋ ಅವರೇ ಬ್ಯಾಟಿಂಗ್ ಮಾಡಬೇಕು‌. ಪಕ್ಷ ಯಾವ ತೀರ್ಮಾನ ತೆಗೆದುಕೊಳ್ಳುತ್ತೆ ಅದಕ್ಕೆ ಬದ್ಧ ಎಂದು ಹೇಳಿದರು.

ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರವಿಲ್ಲ

1994ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ನನಗೆ ಟಿಕೆಟ್ ಕೊಡಲು ಬೇಡವೆಂದು ತಾವೇ ರಾಜೀನಾಮೆ ನೀಡಿದರು. ಆ ವೇಳೆಯಲ್ಲಿ ಅವರ ರಾಜೀನಾಮೆ ಅಂಗೀಕರಿಸಿ ,ಪಕ್ಷ ನನ್ನನ್ನು ಬೆಳೆಸಿದೆ. ಅದಕ್ಕೆ ನಾನು ಋಣಿಯಾಗಿರಬೇಕು ಎಂದು ಸ್ಮರಿಸಿಕೊಂಡರು. ಸೆ.4ರಿಂದ ಅವಿದ್ಯಾವಂತ ಚಾಲಕರ ನೋಂದಣಿ ಮಾಡಿಕೊಂಡು, ಸೆ.17ರಂದು ಪ್ರಧಾನಿ ಮೋದಿ ಅವರ ಜನ್ಮ ದಿನಕ್ಕೆ ಪರವಾನಗಿ ನೀಡಲಾಗುವುದು ಎಂದ್ರು. ಇದೇ ವೇಳೆ ನೆರೆ ಪೀಡಿತ ಪ್ರದೇಶಗಳಿಗೆ ಸಹಾಯ ಮಾಡಿದ ಜನರಿಗೆ ಕೃತಜ್ಞತೆ ಸಲ್ಲಿಸಿದರು.

ABOUT THE AUTHOR

...view details