ಕರ್ನಾಟಕ

karnataka

ಮೃಗಾಲಯದ ಪ್ರಾಣಿಗಳಿಗೆ ಆಹಾರದ ಸಮಸ್ಯೆ ಆಗದಂತೆ ಪರ್ಯಾಯ ವ್ಯವಸ್ಥೆ: ಪ್ರಭು ಚವ್ಹಾಣ್​

By

Published : Feb 16, 2021, 4:39 PM IST

Updated : Feb 16, 2021, 4:56 PM IST

ಮೃಗಾಲಯದ ಪ್ರಾಣಿಗಳಿಗೆ ಆಹಾರದ ಕೊರತೆಯಾದ ವಿಚಾರವಾಗಿ ಯಾವುದೇ ಪತ್ರ ಬಂದಿಲ್ಲ. ಮಾಂಸಹಾರಿ ಪ್ರಾಣಿಗಳಿಗೆ ಯಾವುದೇ ತೊಂದರೆಯಿಲ್ಲ. ಇಷ್ಟುದಿನ ಯಾವುದೇ ರೀತಿಯ ಆಹಾರದ ಕೊರತೆಯೂ ಆಗಿಲ್ಲ. ಹಾಗೇನಾದರೂ ಸಮಸ್ಯೆಯಾದ್ರೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.

Prabhu Chavan
ಪಶುಸಂಗೋಪನಾ ಸಚಿವ ಪ್ರಭು ಚವಾಣ್

ಮೈಸೂರು:ಮೃಗಾಲಯದ ಮಾಂಸಾಹಾರಿ ಪ್ರಾಣಿಗಳಿಗೆ ಸಮಸ್ಯೆಯಾದರೆ, ಪರ್ಯಾಯ ವ್ಯವಸ್ಥೆ ಮಾಡುತ್ತೇವೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೃಗಾಲಯದ ಮಾಂಸಹಾರಿ ಪ್ರಾಣಿಗಳಿಗೆ ಆಹಾರದ ಕೊರತೆಯಾದ ವಿಚಾರವಾಗಿ ಯಾವುದೇ ಪತ್ರ ಬಂದಿಲ್ಲ. ಮಾಂಸಹಾರಿ ಪ್ರಾಣಿಗಳಿಗೆ ಯಾವುದೇ ತೊಂದರೆಯಿಲ್ಲ. ಇಷ್ಟುದಿನ ಯಾವುದೇ ರೀತಿಯ ಆಹಾರದ ಕೊರತೆಯೂ ಆಗಿಲ್ಲ. ಹಾಗೇನಾದರೂ ಸಮಸ್ಯೆಯಾದರೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ ಎಂದರು.

ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್

ಗೋಹತ್ಯೆ ನಿಷೇಧದಿಂದ ರೈತರಿಗೆ ತೊಂದರೆಯಾಗಿಲ್ಲ. ಈ ಕಾಯ್ದೆಯಿಂದ ಕಾಂಗ್ರೆಸಿಗರಿಗೆ ಮಾತ್ರ ತೊಂದರೆಯಾಗಿದೆ. ಸರ್ಕಾರದ ನಿರ್ಧಾರ ಸರಿ ಇದೆ ಎಂದು ರೈತರೇ ಹೇಳುತ್ತಿದ್ದಾರೆ ಎಂದರು. ಈಗಾಗಲೇ ರಾಜ್ಯಪಾಲರ ಅಂಕಿತ ಆಗಿದೆ. ವಿಧಾನಪರಿಷತ್​ನಲ್ಲಿ ಮೂರು ಗಂಟೆ ಚರ್ಚೆ ನಡೆಸಿ, ಅಂಕಿತ ಆಗಿದೆ. ಕಾಂಗ್ರೆಸ್​ನವರಿಗೆ ವಿರೋಧ ಮಾಡೋದೇ ಕೆಲಸ. ರಾಜ್ಯದಲ್ಲಿ ಸಂಪೂರ್ಣವಾಗಿ ಕಸಾಯಿಖಾನೆಗಳನ್ನು ಬಂದ್ ಮಾಡುತ್ತೇವೆ ಎಂದರು.

ಓದಿ: ಪ್ರೇಯಸಿಯ ಮೇಲಿತ್ತು ಪ್ರೀತಿ: ಕಟ್ಕೊಂಡವಳ ಕೊಲೆಗೈದ ಪತಿಮಹಾಶಯ

ಗೋಮಾತೆಯ ರಕ್ಷಣೆ ಸಂಕಲ್ಪ ಮಾಡಿದ್ದೇವೆ. ಗೋವುಗಳ ರಕ್ಷಣೆಗಾಗಿ ಖಾಸಗಿ ಗೋಶಾಲೆಗಳಿವೆ, ಮುಂದಿನ ದಿನಗಳಲ್ಲಿ ಸರ್ಕಾರದಿಂದಲೂ ಗೋಶಾಲೆ ತೆರೆಯಲು ಚಿಂತಿಸಿದ್ದೇವೆ‌ ಎಂದು ತಿಳಿಸಿದರು.

Last Updated : Feb 16, 2021, 4:56 PM IST

ABOUT THE AUTHOR

...view details